ಮೊದಲ ಟಿ20 ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದ ಭಾರತ

ಅಭಿಷೇಕ್‌ ಶರ್ಮಾ, ರಿಂಕು ಸಿಂಗ್‌ ಸಿಡಿಲಬ್ಬರದ ಬ್ಯಾಟಿಂಗ್‌

ನಾಗಪುರ: ನ್ಯೂಜಿಲೇಂಡ್‌ ವಿರುದ್ಧದ ಮೂರು ದಿನಗಳ ಏಕದಿನಸರಣಿಯನ್ನು ಕಳೆದುಕೊಂಡಿರುವ ಟೀಂ ಇಂಡಿಯಾ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ ಮತ್ತು ರಿಂಕು ಸಿಂಗ್‌ ಅವರ ಸ್ಫೋಟಕ ಆಟದಿಂದ 48 ರನ್‌ಗಳಿಂದ ಗೆದ್ದುಕೊಂಡಿದೆ.

ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 239 ರನ್‌ಗಳ ಕಠಿಣ ಗುರಿ ಪಡೆದ ನ್ಯೂಜಿಲೆಂಡ್‌ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 190 ರನ್‌ ಹೊಡೆದು ಸೋಲು ಒಪ್ಪಿಕೊಂಡಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಭಾರತ ಕಡೆಯಿಂದ 14, ನ್ಯೂಜಿಲೆಂಡ್‌ ಕಡೆಯಿಂದ 9 ಸೇರಿ ಒಟ್ಟು 23 ಸಿಕ್ಸ್‌ ಸಿಡಿಯಲ್ಪಟ್ಟಿತ್ತು. ಭಾರತ 21, ನ್ಯೂಜಿಲೆಂಡ್‌ 15 ಬೌಂಡರಿ ಹೊಡೆದಿತ್ತು.





















































 
 

ನ್ಯೂಜಿಲೆಂಡ್‌ 1 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿದ್ದರೂ ಗ್ಲೇನ್‌ ಫಿಲಿಪ್ಸ್‌ ಮತ್ತು ಮಾರ್ಕ್‌ ಚಾಪ್‌ಮನ್‌ ಉತ್ತಮ ಆಟವಾಡಿದರು. ಪಿಲಿಪ್ಸ್‌ 78 ರನ್‌(40 ಎಸೆತ, 4 ಬೌಂಡರಿ, 6 ಸಿಕ್ಸ್‌), ಮಾರ್ಕ್‌ಚಾಪ್‌ಮನ್‌ 39 ರನ್‌(24 ಎಸೆತ, 4 ಬೌಂಡರಿ, 2 ಸಿಕ್ಸ್‌) ಹೊಡೆದು ನ್ಯೂಜಿಲೆಂಡ್‌ ಚೇಸಿಂಗ್‌ನ್ನು ಜೀವಂತವಾಗಿರಿಸಿದರು.

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಭಾರತ 27 ರನ್‌ ಗಳಿಸುವಷ್ಟರಲ್ಲಿ ಸಂಜು ಸಾಮ್ಸನ್‌ ಮತ್ತು ಇಶನ್‌ ಕಿಶನ್‌ ಔಟಾದರು. ಅಭಿಷೇಕ್‌ ಶರ್ಮಾ ಮತ್ತು ಸೂರ್ಯಕುಮಾರ್‌ ಯಾದವ್‌ ಮೂರನೇ ವಿಕೆಟಿಗೆ 47 ಎಸೆತಗಳಲ್ಲಿ 99 ರನ್‌ ಜೊತೆಯಾಟವಾಡಿದರು. ಸೂರ್ಯಕುಮಾರ್‌ 32 ರನ್‌(22 ಎಸೆತ, 4 ಬೌಂಡರಿ, 1 ಸಿಕ್ಸ್‌), ಹಾರ್ದಿಕ್‌ ಪಾಂಡ್ಯ 25 ರನ್‌(16 ಎಸೆತ, 3 ಬೌಂಡರಿ, 1 ಸಿಕ್ಸ್‌) ಹೊಡೆದು ಔಟಾದರೆ ಅಭಿಷೇಕ್‌ ಶರ್ಮಾ 84 ರನ್‌(35 ಎಸೆತ, 5 ಬೌಂಡರಿ, 8 ಸಿಕ್ಸ್‌) ಕೊನೆಯಲ್ಲಿ ರಿಂಕು ಸಿಂಗ್‌ ಔಟಾಗದೇ 44 ರನ್‌ (20 ಎಸೆತ, 4 ಬೌಂಡರಿ, 3 ಸಿಕ್ಸ್‌) ಹೊಡೆದರು.

ಅಭಿಷೇಕ್‌ ಶರ್ಮಾ 22 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ ನಂತರದ 15 ಎಸೆತಗಳಲ್ಲಿ 34 ರನ್‌ ಚಚ್ಚಿದರು. ಅಭಿಷೇಕ್‌ ಮತ್ತು ರಿಂಕು ಸ್ಫೋಟದ ಆಟದ ನೆರವಿನಿಂದ ಭಾರತ 7 ವಿಕೆಟ್‌ ನಷ್ಟಕ್ಕೆ 238 ರನ್‌ ಹೊಡೆಯಿತು.

239 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್​ಗೆ ಭಾರತದ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. ಅರ್ಷದೀಪ್ ಸಿಂಗ್ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿ ತಂಡಕ್ಕೆ ಮೊದಲ ಬ್ರೇಕ್‌ಥ್ರೂ ನೀಡಿದರು. ನಂತರ ಹಾರ್ದಿಕ್ ಪಾಂಡ್ಯ ಎರಡನೇ ಓವರ್‌ನಲ್ಲಿ ರಚಿನ್ ರವೀಂದ್ರ ಅವರನ್ನು ಔಟ್ ಮಾಡಿ ತಂಡಕ್ಕೆ ಮುನ್ನಡೆ ಒದಗಿಸಿದರು. ಆದಾಗ್ಯೂ, ಗ್ಲೆನ್ ಫಿಲಿಪ್ಸ್ ಸ್ಫೋಟಕ ಇನ್ನಿಂಗ್ಸ್ ಆಡಿ 40 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಆರು ಸಿಕ್ಸರ್‌ಗಳೊಂದಿಗೆ 78 ರನ್ ಗಳಿಸಿದರು. ಮಾರ್ಕ್ ಚಾಪ್‌ಮನ್ ಕೂಡ 39 ರನ್‌ಗಳ ಹೋರಾಟದ ಬ್ಯಾಟಿಂಗ್ ಪ್ರದರ್ಶಿಸಿದರಾದರೂ ಅದು ತಂಡಕ್ಕೆ ಸಾಕಾಗಲಿಲ್ಲ. ಅಂತಿಮವಾಗಿ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ 190 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.

ವರುಣ್ ಚಕ್ರವರ್ತಿ ಮತ್ತು ಶಿವಂ ದುಬೆ ಭಾರತದ ಪರ ಅತ್ಯಂತ ಯಶಸ್ವಿ ಬೌಲರ್‌ಗಳಾಗಿದ್ದು, ತಲಾ ಎರಡು ವಿಕೆಟ್‌ಗಳನ್ನು ಪಡೆದರು. ಅರ್ಷದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು. ಇದಲ್ಲದೆ, ಈ ಪಂದ್ಯದಲ್ಲಿ ಎರಡೂ ತಂಡಗಳು ಒಟ್ಟಾಗಿ 428 ರನ್ ಗಳಿಸಿದವು, ಇದು ಒಂದು ದಾಖಲೆ. ಎರಡೂ ತಂಡಗಳ ನಡುವಿನ ಯಾವುದೇ ಟಿ20 ಪಂದ್ಯದಲ್ಲಿ ಇಷ್ಟು ಬೃಹತ್ ಮೊತ್ತ ದಾಖಲಾಗಿರುವುದು ಇದೇ ಮೊದಲು.

error: Content is protected !!
Scroll to Top