ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದ ಸಂತ ಫಿಲೋಮಿನಾ ಕಾಲೇಜಿನ ದೈ. ಶಿ. ನಿರ್ದೇಶಕ ಎಲಿಯಾಸ್ ಪಿಂಟೋ‌ಗೆ ಜೈಲು ಶಿಕ್ಷೆ

ಪುತ್ತೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕನಾಗಿದ್ದ ಕಾಮುಕ ಎಲಿಯಾಸ್ ಪಿಂಟೋ‌ನಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಆರೋಪಿ ಎಲಿಯಾಸ್ ಪಿಂಟೋ(55) ತಾನು ಕಾರ್ಯ ನಿರ್ವಹಿಸುತ್ತಿದ್ದ ಕಾಲೇಜಿನ ಪ್ರಥಮ ಪಿಯುಸಿಯ ಅಪ್ರಾಪ್ತ ವಿದ್ಯಾರ್ಥಿನಿಯನ್ನು ತನ್ನ ಲೈಂಗಿಕ ಕಾಮನೆಗೆ ಬಳಸಿಕೊಳ್ಳಲು ಪ್ರಯತ್ನಿಸಿದ್ದ.

ಸಂತ್ರಸ್ತ ಹುಡುಗಿ ಕ್ರೀಡಾ ಅಭ್ಯಾಸಕ್ಕೆ ಬಂದು ಒಂದು ಸುತ್ತು ಓಡಿ ಆ ಬಳಿಕ ವರಾಂಡದಲ್ಲಿ ನಿಂತಿದ್ದಳು. ಈ ವೇಳೆ ಆರೋಪಿ ಪಿಂಟೋ ಕಾರಣ ಕೇಳಿದ್ದು, ಆಕೆ ತನಗೆ ಸೊಂಟ ನೋವು ಎಂದು ಹೇಳಿದ್ದಾಳೆ. ಈ ಸಮಯದಲ್ಲಿ ಆತ ಆಕೆಯನ್ನು ಕೊಠಡಿಯ ಕ್ಯಾಬೀನ್‌ಗೆ ಕರೆದುಕೊಂಡು ಹೋಗಿ ಆತನ ತೃಷೆ ತೀರಿಸಲು ಆಕೆಯ ಸೊಂಟ ಮಸಾಜ್ ಮಾಡಲು ಹೋಗಿದ್ದಾನೆ. ಹಾಗೆಯೇ ಆಕೆಯ ಪ್ಯಾಂಟ್ ಜಾರಿಸಿದ್ದಾನೆ. ಹುಡುಗಿ ಪ್ರತಿಭಟಿಸಿದ್ದಾಳೆ. ಆಕೆಯ ಟೀ ಶರ್ಟ್ ಮೇಲೆತ್ತಿ ಹೊಟ್ಟೆ ಅದುಮಿ, ಎದೆಯ ವರೆಗೆ ಕೈ ಹಾಕಿದ್ದಾನೆ.





















































 
 

ಸಂತ್ರಸ್ತ‌ ಬಾಲಕಿ ಆತನ ಮೇಲೆ ಪೊಲೀಸರಿಗೆ ದೂರು ನೀಡಿದ್ದು, ಮಹಿಳಾ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ, ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

error: Content is protected !!
Scroll to Top