ದ.ಕನ್ನಡ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜನ ಜಾಗೃತಿ ಕಾರ್ಯಕ್ರಮ

ಬೀದಿ ನಾಟಕದ ಮುಖೇನ ಅರೋಗ್ಯದ ಮಹತ್ವದ ಕುರಿತು ಮಾಹಿತಿ

ಮಂಗಳೂರು : ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೋಟೆಕಾರ್ ಪ್ರಾಥಮಿಕ ಆರೋಗ್ಯ ಕೇಂದ್ರ, ಕೊಲ್ಯ ಅಂಗನವಾಡಿ ಕೇಂದ್ರ 1 ರ ಬಳಿ ಇಂದು ದ.ಕನ್ನಡ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಗರದ ಪಿಂಗಾರ ಕಲಾ ಸಂಘ ತಂಡದ ಕಲಾವಿದರಿಂದ ಜನಜಾಗೃತಿಗಾಗಿ ಬೀದಿನಾಟಕ ನಡೆಯಿತು.

ಈ ಬೀದಿ ನಾಟಕದಲ್ಲಿ ಮಲೇರಿಯಾ, ಡೆಂಗ್ಯೂ, ಇಲಿಜ್ವರ, ಮಧುಮೇಹ, B.P, ಪಾರ್ಶ್ವವಾಯು, ಕುಷ್ಠರೋಗ, ಅಂಧತ್ವ ನಿವಾರಣೆ , ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ, ಆಯುಷ್ಮಾನ್ ಭಾರತ್, ಅಭಾ ಕಾರ್ಡ್, R C H, ಭ್ರೂಣ ಲಿಂಗ ಪತ್ತೆ, ನಗುಮಗು, ಹದಿಹರೆಯದ ಹೆಣ್ಣು ಮಕ್ಕಳಿಗೆ ಮುಟ್ಟಿನ ಕಪ್. ಅನಿಮೀಯ ಮುಕ್ತ ಪೌಷ್ಟಿಕ ಕಾರ್ಯಕ್ರಮ, ಕುಟುಂಬ ಕಲ್ಯಾಣ ಕಾರ್ಯಕ್ರಮ, ಹೃದಯ ಜ್ಯೋತಿ ಯೋಜನೆ, ಗೃಹ ಆರೋಗ್ಯ ಯೋಜನೆ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ, 108 ಸೇವೆ, ಹಾವು ಕಡಿತ, ನಾಯಿ ಕಡಿತ, ಪ್ರಾಣಿ ಕಡಿತ, ಕಿಲ್ಕಾರಿ ಆಪ್, ಡಯಾಲಿಸಿಸ್, ಕುಟುಂಬ ಕಲ್ಯಾಣ ಕಾರ್ಯಕ್ರಮ, ಗೃಹ ಆರೋಗ್ಯ ಕಾರ್ಯಕ್ರಮ.. ಇನ್ನೂ ಹಲವಾರು ಸರಕಾರದ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಅರಿವು ನೀಡಲಾಯಿತು.





















































 
 

ಪಿಂಗಾರ ಕಲಾ ತಂಡ ಕೈಕಂಬ ಇದರ ಅಧ್ಯಕ್ಷರಾದ ಭರತ್ ಎಸ್ ಕರ್ಕೇರ, ಸಂತೋಷ್ ಕಾರ್ಕಳ, ಪೃಥ್ವಿರಾಜ್, ರವಿ ಎಂ ಪೆರ್ಲಂಪಾಡಿ, ಪ್ರಶಾಂತ್, ಧರ್ಮಶ್ರೀ ಧರ್ಮಸ್ಥಳ ಇವರು ನಾಟಕದಲ್ಲಿ ಭಾಗವಹಿಸಿದ್ದಾರೆ.

ಕಾರ್ಯಕ್ರಮದಲ್ಲಿ BHEO ಶ್ರೀಮತಿ ಲಲಿತಾ, ಶ್ರೀಮತಿ ರೀತ ಆರ್ ಶೆಟ್ಟಿ, ಶ್ರೀಮತಿ ಸಾವಿತ್ರಿ ಆರ್ ಗಟ್ಟಿ, ಶ್ರೀಮತಿ ಸುಧಾ, ಶ್ರೀಮತಿ ಶಶಿಕಲಾ, PHCO ರಾಜೇಶ್ವರಿ, CHO ಅನಿತಾ, ಅಂಗನವಾಡಿ ಶಿಕ್ಷಕಿ ಶ್ರೀಮತಿ ಮೀನಾ ಉಪಸ್ಥಿತರಿದ್ದರು.

error: Content is protected !!
Scroll to Top