ಅಯೋಧ್ಯೆಯ ರಾಮ ಕಥಾ ವಸ್ತು ಸಂಗ್ರಹಾಲಯಕ್ಕೆ ರಾಮಾಯಣದ ಪುರಾತನ ಸಂಸ್ಕೃತ ಹಸ್ತಪ್ರತಿ

ನವದೆಹಲಿ: ಅಯೋಧ್ಯೆಯ ರಾಮ ಕಥಾ ವಸ್ತು ಸಂಗ್ರಹಾಲಯಕ್ಕೆ ಉಡುಗೊರೆಯಾಗಿ ರಾಮಾಯಣದ 233 ವರುಷಗಳಷ್ಟು ಹಳೆಯದಾದ‌ ಬಲು ಅಪರೂಪದ ಸಂಸ್ಕೃತ ಹಸ್ತಪ್ರತಿಯನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದು ಕೇಂದ್ರ ಸಾಂಸ್ಕೃತಿಕ ಸಚಿವಾಲಯ ಮಾಹಿತಿ ನೀಡಿದೆ.

ಕೇಂದ್ರ ಸಂಸ್ಕೃತ ವಿದ್ಯಾಲಯದ ಕುಲಪತಿ ಶ್ರೀನಿವಾಸ ವರಖೇಡಿ ಅವರು ಈ ಕೃತಿಯನ್ನು ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದ ಕಾರ್ಯಕಾರಿ ಮಂಡಳಿ ಅಧ್ಯಕ್ವ ನೃಪೇಂದ್ರ ಮಿಶ್ರಾ ಅವರಿಗೆ ಹಸ್ತಾಂತರ ಮಾಡಿದ್ದಾರೆ.

ಈ ಹಸ್ತಪ್ರತಿಯು ಕ್ರಿ. ಶ. 1792 ಕ್ಕೆ ಸೇರಿದ್ದಾಗಿದೆ. ಆದಿಕವಿ ವಾಲ್ಮೀಕಿ ವಿರಚಿತ ಮೂಲ ಶ್ಲೋಕಗಳೊಂದಿಗೆ ಮಹೇಶ್ವರ ತೀರ್ಥರ ಶಾಸ್ತ್ರೀಯ ವ್ಯಾಖ್ಯಾನವನ್ನು ಇದು ಒಳಗೊಂಡಿದೆ. ಇದನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ. ಈ ಹಸ್ತಪ್ರತಿಯಲ್ಲಿ ರಾಮಾಯಣದ ಐದು ಪ್ರಮುಖ ಕಾಂಡಗಳಾದ ಬಾಲಕಾಂಡ, ಅರಣ್ಯಕಾಂಡ, ಕಿಷ್ಕಂಧಾಕಾಂಡ, ಸುಂದರಕಾಂಡ ಮತ್ತು ಯುದ್ಧಕಾಂಡಗಳ ವಿವರಗಳಿವೆ. ಈ ಅಮೂಲ್ಯ ಹಸ್ತಪ್ರತಿಯನ್ನು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಈಗ ಇದನ್ನು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ‘ಅಂತರರಾಷ್ಟ್ರೀಯ ರಾಮಕಥಾ ಸಂಗ್ರಹಾಲಯಕ್ಕೆ’ ಶಾಶ್ವತವಾಗಿ ಹಸ್ತಾಂತರಿಸಲಾಗಿದೆ. ಅಯೋಧ್ಯೆಯನ್ನು ರಾಮಾಯಣ ಪರಂಪರೆಯ ಜಾಗತಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.





















































 
 

error: Content is protected !!
Scroll to Top