ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ 106 ಕೆಜಿ ಗಾಂಜಾ ವಶ ಮತ್ತು ಇಬ್ಬರು ಆರೋಪಿಗಳ ಬಂಧನವಾಗಿದೆ.
ಪಡುವನ್ನೂರು ಗ್ರಾಮದ ಸಜಂಕಾಡಿಯ ಸಮೀಪ ಈ ಖದೀಮರನ್ನು ಮತ್ತು ಗಾಂಜಾ ಸಾಗಾಟಕ್ಕೆ ಬಳಕೆ ಮಾಡಿದ ಕಾರು ಮತ್ತು ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ಕಾರು ಚಾಲಕ ಬೆಳ್ತಂಗಡಿಯ ರಫೀಕ್ ಪಿ ಎಂಬಾತನ ವರ್ತನೆ ಅನುಮಾನಾಸ್ಪದವಾಗಿ ಇದ್ದುದನ್ನು ಗಮನಿಸಿ ವಾಹನ ತಪಾಸಣೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ನೂರು ಗ್ರಾಂ ತೂಕದ ಗಾಂಜಾ ಹೂ, ಎಲೆ, ಕಾಯಿ ಪ್ಲಾಸ್ಟಿಕ್ ಕವರ್‌ಗಳಲ್ಲಿ ಪತ್ತೆಯಾಗಿದೆ. ಗೂಡ್ಸ್ ವಾಹನದ ಚಾಲಕ ಅಬ್ದುಲ್ ಸಾದಿಕ್ ಎಂಬವನನ್ನೂ ತಪಾಸಣೆ ಮಾಡಲಾಗಿದ್ದು, ಆತನ ವಾಹನದಲ್ಲಿ 106 kg ತೂಕದ ಗಾಂಜಾ ಪತ್ತೆಯಾಗಿದೆ. ಈ ಗಾಂಜಾದ ಮೊತ್ತ 53 ಲಕ್ಷ ಎಂದು ಅಂದಾಜಿಸಲಾಗಿದೆ.
ಸಾಗಾಟ ಮಾಡುತ್ತಿದ್ದ ಗಾಂಜಾವನ್ನು ಕೇರಳ, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಾರಾಟ ಮಾಡಲು ಸಂಚು ನಡೆಸಲಾಗಿತ್ತು ಎಂದು ತಿಳಿದು ಬಂದಿದೆ.
























