ನಾನು ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ

ನವದೆಹಲಿ: ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಪ್ರಧಾನಿ ಮೋದಿ ನಬಿನ್ ಅವರು ನನ್ನ ಬಾಸ್, ನಾನು ಪಕ್ಷದ ಕಾರ್ಯಕರ್ತ ಎಂದು ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷ ಒಂದು ಸಂಸ್ಕೃತಿ. ಪಕ್ಷ ಒಂದು ಕುಟುಂಬ. ನಮ್ಮ ಸಂಬಂಧಗಳು ಸದಸ್ಯತ್ವವನ್ನು ಮೀರಿದಂತಹವುಗಳು. ನಮ್ಮ ಅಧ್ಯಕ್ಷರು ಬದಲಾದರೂ ಆದರ್ಶಗಳು ಬದಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ನಮ್ಮ ಪಕ್ಷದಲ್ಲಿ ನಿರ್ದೇಶನ ಒಂದೇ ಆಗಿರುತ್ತದೆ. ಬದಲಾಗುವುದು ನಾಯಕತ್ವ ಮಾತ್ರ. ದೇಶದ ಪ್ರತಿಯೊಂದು ಮೂಲೆಯ ಜನರು ಇಂದು ಬಿಜೆಪಿ ಜೊತೆಗೆ ಇದ್ದಾರೆ. ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ನಬಿನ್ ಅವರಿಗೆ ಯುವ ಶಕ್ತಿಯ ಜೊತೆಗೆ ಕಾರ್ಯ ನಿರ್ವಹಿಸಿ ಅನುಭವ ಇದೆ. ಸಂಘಟನೆಯಲ್ಲಿ ಕಾರ್ಯ ನಿರ್ವಹಿಸುವ ಶಕ್ತಿ ಇದೆ. ನಮ್ಮೆಲ್ಲರಿಗೂ ಮುಂದಿನ 25 ವರ್ಷ ಬಹು ಮುಖ್ಯ ವಾಗಿದ್ದು, ಇದು ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಬೇಕಾದ ಸಮಯ ಎಂದು ಅವರು ನುಡಿದಿದ್ದಾರೆ.





















































 
 

error: Content is protected !!
Scroll to Top