ಡಿಜಿಪಿ ‌ರಾಮಚಂದ್ರ ರಾವ್‌ಗೆ ವಿಡಿಯೋ ಬಳಿಕ ಅಡಿಯೋ ಶಾಕ್

ಬೆಂಗಳೂರು: ಡಿಜಿಪಿ ರಾಮಚಂದ್ರ ರಾವ್ ಅವರ ಚೆಲ್ಲಾಟದ ದೃಶ್ಯಗಳ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಒಂದು ಆಡಿಯೋ ಕ್ಲಿಪ್ ಸಹ ವೈರಲ್ ಆಗಿದೆ. ಈ ಎಲ್ಲಾ ಘಟನೆಗಳು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಯನ್ನು ಮುಜುಗರಕ್ಕೀಡು ಮಾಡಿದೆ.

ಈ ವಿಡಿಯೋ ಮತ್ತು ಅಡಿಯೋಗಳೆರಡರ ಬಗ್ಗೆಯೂ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ಅಗತ್ಯ ಎಂಬ ಒತ್ತಾಯಗಳು ‌ಸಾರ್ವಜನಿಕ ವಲಯದಿಂದ ಕೇಳಿ ಬರಲಾರಂಭಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಇನ್ನು ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ರಾಮಚಂದ್ರ ರಾವ್ ಮಾತನಾಡಿದ್ದು, ಇದು ಎಐ ತಂತ್ರಜ್ಞಾನ ಬಳಸಿ ಮಾಡಿರುವ ಕೃತಕ ವಿಡಿಯೋ. ತಮ್ಮ ಪ್ರತಿಷ್ಟೆಗೆ ಧಕ್ಕೆ ತರಲು ಇಂತಹ ಪ್ರಯತ್ನ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಜೊತೆಗೆ ಇದರ ಸಂಪೂರ್ಣ ತನಿಖೆಗೆ ಒತ್ತಾಯಿಸಿದ್ದಾರೆ.





















































 
 

ರಾಮಚಂದ್ರ ರಾವ್ ಅವರನ್ನು ಸಸ್ಪೆಂಡ್ ಮಾಡಿ ರಾಜ್ಯ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದ್ದು, ಇದಕ್ಕೆ ತನಿಖೆ ಬಾಕಿ ಇರುವ ಕಾರಣವನ್ನು ನೀಡಿದೆ.

error: Content is protected !!
Scroll to Top