ಕುಮಾರಧಾರಾ ನದಿಯಲ್ಲಿ ಮುಳುಗಿ ಇಬ್ಬರು ಸಾವು

ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಬಂದಿದ್ದಾಗ ಸಂಭವಿಸಿದ ದುರಂತ

ಸುಬ್ರಹ್ಮಣ್ಯ : ಕುಮಾರಧಾರಾ ನದಿಗೆ ತೆರಳಿದ್ದ ಇಬ್ಬರು ಯುವಕರು ಮುಳುಗಿ ಸಾವನ್ನಪ್ಪಿದ ಘಟನೆ ಭಾನುವಾರ ಸಂಭವಿಸಿದೆ. ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಸುಳ್ಯ ಕೊಲ್ಲಮೊಗ್ರು ಗ್ರಾಮದ ಜಯರಾಮ ಎಂಬವರು ದೂರು ದಾಖಲಿಸಿರುತ್ತಾರೆ.

ಜ.18 ರಂದು ಸಂಜೆ ಜಯರಾಮ ಅವರ ಸಹೋದರನ ಮಗ ಸುಜಿತ್ (28) ಮತ್ತು ಗೋಪಾಲ್ ನಾಯರ್ ಎಂಬವರ ಮಗ ಹರಿಪ್ರಸಾದ್ (39) ಎಂಬವರು ಸುಬ್ರಹ್ಮಣ್ಯದ ಕುಲ್ಕುಂದ ಎಂಬಲ್ಲಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಮಾಹಿತಿ ಬಂದ ಮೇರೆಗೆ, ಸ್ಥಳಕ್ಕೆ ತೆರಳಿ ನೋಡಿದಾಗ ಸುಜಿತ್ ಮತ್ತು ಹರಿಪ್ರಸಾದ್ ಅವರ ಮೃತದೇಹ ನದಿ ದಡದಲ್ಲಿತ್ತು.





















































 
 

ಹರಿಪ್ರಸಾದ್ ಹಾಗೂ ಸುಜಿತ್ ಸ್ನೇಹಿತರೊಂದಿಗೆ ನದಿದಡದಲ್ಲಿದ್ದಾಗ, ಸುಜಿತ್ ಈಜಾಡಲು ನೀರಿಗೆ ಇಳಿದಿದ್ದಾರೆ. ಈ ವೇಳೆ ಆತನಿಗೆ ಈಜು ಬಾರದೆ ನೀರಿನಲ್ಲಿ ಮುಳುಗಿರುತ್ತಾರೆ. ಆತನನ್ನು ರಕ್ಷಿಸಲು ಹರಿಪ್ರಸಾದ್ ನದಿನೀರಿಗೆ ಇಳಿದು ಈರ್ವರೂ ಮುಳುಗಿ ಮೃತಪಟ್ಟಿದ್ದಾರೆ. ಮೃತರಿಬ್ಬರೂ ಅವಿವಾಹಿತರಾಗಿದ್ದು, ತಮ್ಮ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಕುಮಾರಧಾರಾ ನದಿಗೆ ಕುಲ್ಕುಂದ ಬಳಿ ಬಂದಿದ್ದರು.

ಬಗ್ಗೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂಬರ್: 02/2026 ಕಲಂ: 194 BNSS ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ.

error: Content is protected !!
Scroll to Top