ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವಿಟ್ಲ ತಾಲೂಕಿನ ಸಾಲೆತ್ತೂರು ವಲಯ ಕುಲಾಲ್ ಎಂಬಲ್ಲಿ ವಾಸವಿರುವ ಲೀಲಾವತಿ ತಿಮಪ್ಪ ದಂಪತಿಗಳಿಗೆ ಕಳೆದ 6 ವರ್ಷದಿಂದ ಶ್ರೀ ಕ್ಷೇತ್ರದಿಂದ ಮಾಶಾಸನ ದೊರೆಯುತ್ತಿದ್ದು ಇವರಿಗೆ ವಾಸಕ್ಕೆ ಯೋಗ್ಯವಾದ ಮನೆ ಇಲ್ಲದ ಕಾರಣ ಕ್ಷೇತ್ರದಿಂದ ವಾತ್ಸಲ್ಯ ಮನೆ ಮಂಜೂರಾಗಿದೆ. ಈ ಮನೆಯ ಗುದ್ದಲಿ ಪೂಜೆಯನ್ನು ವಲಯದ ಭಜನಾ ಪರಿಷತ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ತಾಲ್ಲೂಕು ಯೋಜನಾಧಿಕಾರಿ ಸುರೇಶ್ ಗೌಡ, ಜನಜಾಗೃತಿ ಸದಸ್ ರಾಜಾರಾಮ್ ಹೆಗ್ಡೆ ಕುದ್ರಿಯ ನೆರವೇರಿಸಿದರು.

ತಾಲ್ಲೂಕು ಯೋಜನಾಧಿಕಾರಿ ಮಾತೃಶ್ರೀ ಅಮ್ಮನವರು ವಾತ್ಸಲ್ಯ ಸದಸ್ಯರಿಗೆ ನೀಡುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂಧರ್ಭ ಜನಜಾಗೃತಿ ಸದಸ್ಯ ರಂಜಿತ್, ಶೌರ್ಯ ಪುರುಷೋತ್ತಮ್ ಹಾಗೂ ಸದಸ್ಯರು, ಒಕ್ಕೂಟ ಅಧ್ಯಕ್ಷರು, ಪದಾಧಿಕಾರಿಗಳು, ಸಂಘದ ಸದಸ್ಯರು, ಕೃಷಿ ಅಧಿಕಾರಿ ಐತಪ್ಪ, ಜ್ಞಾನ ವಿಕಾಸ ಸಮನ್ವಯಧಿಕಾರಿ ದೀಪ, ಸೇವಾಪ್ರತಿನಿಧಿ ಉಪಸ್ಥಿತರಿದ್ದರು.





















































 
 

error: Content is protected !!
Scroll to Top