ಧಾರ್ಮಿಕ ಭಾವನೆಗೆ ಧಕ್ಕೆ: ಹಿಂದೂ ನಾಯಕಿಯ ವಿರುದ್ಧ ದೂರು ದಾಖಲು

ಬೆಳಗಾವಿ: ಹಿಂದೂ ಸಮ್ಮೇಳನದ ಶೋಭಾಯಾತ್ರೆಯ ವೇಳೆ ಹಿಂದೂ ನಾಯಕಿ ಹರ್ಷಿತಾ ಠಾಕೂರ್ ಎಂಬವರು ದರ್ಗಾ‌ವೊಂದರ ಕಡೆಗೆ ಬಾಣ ಬಿಟ್ಚಂತೆ ಕೈ ಸನ್ನೆ ಮಾಡಿದ್ದು ಅವರ ವಿರುದ್ಧ ದೂರು ದಾಖಲಾಗಿದೆ.

ಧಾರ್ಮಿಕ ಭಾವನೆಗೆ ‌ಧಕ್ಕೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಮಚ್ಚೆ ಗ್ರಾಮದಲ್ಲಿ ನಡೆದ ಶೋಭಾಯಾತ್ರೆಯ ಸಂದರ್ಭದಲ್ಲಿ ತೆರೆದ ವಾಹನದಲ್ಲಿ ನಿಂತಿದ್ದ ಹರ್ಷಿತಾ ದರ್ಗಾದತ್ತ ಬಾಣ ಬಿಡುವಂತೆ ಕೈ ಚಾಚಿದ್ದರು. ಆಗ ನೆರೆದಿದ್ದವರು ಜೈ ಶ್ರೀ ರಾಮ್ ಘೋಷಣೆ ಕೂಗಿದ್ದಾರೆ. ಹಾಗೆಯೇ ಸಮಾವೇಶದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂಬುದಾಗಿಯೂ ದೂರಿನಲ್ಲಿ ತಿಳಿಸಿದ್ದಾರೆ.





















































 
 

ಸಮ್ಮೇಳನದ ಆಯೇಜಕರಾದ ಬೆಳಗಾವಿಯ ಸುಪ್ರೀತ್ ಸಿಂಪಿ, ಶ್ರೀಕಾಂತ್ ಕಾಂಬ್ಳೆ, ಬೆಟ್ಟಪ್ಪ ತಾರೀಹಾಳ, ಶಿವಾಜಿ ಶಹಾಪುರಕರ, ಗಂಗಾರಾಮ ತಾರಿಹಾಳ, ಕಲ್ಲಪ್ಪ ಅವರ ಮೇಲೂ ದೂರು ದಾಖಲಾಗಿದೆ.

error: Content is protected !!
Scroll to Top