ಮಂಗಳೂರು ಕಾರಾಗೃಹದಲ್ಲಿ ಮೊಬೈಲ್‌ಗಳು, ಸಿಮ್, ಚಾರ್ಜರ್ ಪತ್ತೆ

ಮಂಗಳೂರು: ಬೆಂಗಳೂರಿನಲ್ಲಿ ಬಂಧೀಖಾನೆ ಡಿಜಿಪಿಯಾಗಿ ಅಲೋಕ್ ‌ಕುಮಾರ್ ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ‌ಬಂಧೀಖಾನೆ ಭದ್ರತೆ ಹೆಚ್ಚಿಸಲಾಗಿದೆ. ಅವರು ಮಂಗಳೂರಿನ ಕಾರಾಗೃಹಕ್ಕೂ ‌ತೆರಳಿ ಪರಿಶೀಲನೆ ನಡೆಸಿ, ಎಚ್ಚರಿಕೆ ನೀಡಿದ್ದರು.

ಇದರ ಬೆನ್ನಲ್ಲೇ ಮಂಗಳೂರು ಬಂಧೀಖಾನೆಯಲ್ಲಿ ಮೂರು ಮೊಬೈಲ್ ಫೋನ್, ಸಿಮ್ ಪತ್ತೆಯಾಗಿದೆ. ಜೈಲಧಿಕಾರಿಗಳು ಜ. 14 ರಂದು ಕಾರಾಗೃಹದಲ್ಲಿ ತಪಾಸಣೆ ನಡೆಸಿದ್ದು, ಈ ವೇಳೆ A ವಿಭಾಗದ ಮೂರನೇ ಕೊಠಡಿಯಲ್ಲಿ ಸಿಮ್ ಸಹಿತ ಮೊಬೈಲ್ ಫೋನ್, ಕೀ ಪ್ಯಾಡ್ ಫೋನ್, ಸಿನ್, ಚಾರ್ಜರ್, ಅಡಾಪ್ಟರ್, ಚಾರ್ಜರ್ ಕೇಬಲ್ ಗಳು ಪತ್ತೆಯಾಗಿವೆ.

ಹೀಗೆಯೇ B ವಿಭಾಗದ ಐದನೇ ಕೋಣೆಯಲ್ಲಿ ನೊಕಿಯಾ ಕಿ ಪ್ಯಾಡ್ ಫೋನ್ ಸಿಕ್ಕಿದೆ. ಈ ಎಲ್ಲಾ ಮಾಹಿತಿಗಳನ್ನು ಮೇಲಧಿಕಾರಿಗಳಿಗೆ ನೀಡಲಾಗಿದ್ದು, ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.





















































 
 

error: Content is protected !!
Scroll to Top