ಇಂದು, ನಾಳೆ ತಣ್ಣೀರುಬಾವಿ ಬೀಚ್‌ನಲ್ಲಿ ವಿಶ್ವವಿಖ್ಯಾತ ಗಾಳಿಪಟ ಉತ್ಸವ

15 ದೇಶಗಳ 30 ಅಂತಾರಾಷ್ಟ್ರೀಯ ತಂಡಗಳಿಂದ ಆಕರ್ಷಕ ಗಾಳಿಪಟಗಳ ಹಾರಾಟ

ಮಂಗಳೂರು : ಕರಾವಳಿ ಉತ್ಸವದ ಅಂಗವಾದ ಮಂಗಳೂರಿನ ವಿಶ್ವವಿಖ್ಯಾತ ಗಾಳಿಪಟ ಉತ್ಸವ ಇಂದು ಮತ್ತು ನಾಳೆ ತಣ್ಣೀರುಬಾವಿ ಬ್ಲೂ ಬೇ ಬೀಚ್‌ಲ್ಲಿ ನಡೆಯಲಿದೆ. 9ನೇ ಅವೃತ್ತಿಯ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸಂಜೆ 3 ಗಂಟೆಗೆ ಆರಂಭವಾಗಲಿದ್ದು, ಇದರಲ್ಲಿ 15 ದೇಶಗಳ 30 ಅಂತಾರಾಷ್ಟ್ರೀಯ ಗಾಳಿಪಟುಗಳು ಈಗಾಗಲೇ ಮಂಗಳೂರಿಗೆ ಆಗಮಿಸಿದ್ದಾರೆ.

ಭಾರತ ಮತ್ತು ವಿದೇಶಗಳ ಒಟ್ಟು 62 ನುರಿತ ಗಾಳಿಪಟ ಹಾರಾಟಗಾರರು ತಮ್ಮ ವೈವಿಧ್ಯಮಯ ಗಾಳಿಪಟಗಳನ್ನು ಬಾನಂಗಳದಲ್ಲಿ ಹಾರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ. ಉತ್ಸವದಲ್ಲಿ ಸಾಂಪ್ರದಾಯಿಕ, ಏರೋಫಾಯಿಲ್, ಇನ್‌ಪ್ಲೇಟಬಲ್ ಹಾಗೂ ಕ್ವಾಡ್‌ಲೈನ್ ಸ್ಪೋರ್ಟ್ ಗಾಳಿಪಟಗಳ ಪ್ರದರ್ಶನ ಇರಲಿದೆ ಎಂದರು.





















































 
 

ಗಾಳಿಪಟ ಉತ್ಸವವನ್ನು ಆಯೋಜಿಸುತ್ತಿರುವ ಟೀಮ್ ಮಂಗಳೂರು ತಂಡದಿಂದ ಸಾಂಸ್ಕೃತಿಕ ಗಾಳಿಪಟಗಳ ಜತೆಗೆ ವಿಶೇಷವಾಗಿ ತುಳುನಾಡಿನ ಸಾಂಸ್ಕೃತಿಕ ವೈಭವ ಪ್ರತಿಬಿಂಬಿಸುವ ರಥ ಎಂಬ ಹೊಸ ಗಾಳಿಪಟವನ್ನು ಪರಿಚಯಿಸಲಾಗುತ್ತಿದೆ.

ಬೀಚ್‌ನ 2 ಕಿ.ಮೀ. ಅಂತರದಲ್ಲಿ 10 ಕಡೆ 1900 ಕಾರುಗಳಿಗೆ ಹಾಗೂ ನಾಲ್ಕು ಕಡೆ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸುಲ್ತಾನ್ ಬತ್ತೇರಿಯಿಂದ ಫಲ್ಗುಣಿ ನದಿ ಮೂಲಕ ಫೆರಿ ಸೇವೆಯ ಸೌಲಭ್ಯ ಪಡೆದು ತಣ್ಣೀರುಬಾವಿ ಬೀಚ್‌ಗೆ ಆಗಮಿಸಬಹುದು. ಕೆಐಒಸಿಎಲ್ ವೃತ್ತದಿಂದ ಬ್ಲೂ ಬೇ ಬೀಚ್‌ಗೆ ಬಸ್ ಮೂಲಕ ಪಿಕಪ್ ಮತ್ತು ಡ್ರಾಪ್ ವ್ಯವಸ್ಥೆ ಇರಲಿದೆ.

1995ರಲ್ಲಿ ಸ್ಥಾಪಿತವಾದ ಟೀಮ್ ಮಂಗಳೂರು ಗಾಳಿಪಟ ಹಾರಾಟವನ್ನು ಕಲೆಯಾಗಿ ರೂಪಿಸಿಕೊಂಡು ಬಂದಿದೆ. ಎಂಆರ್‌ಪಿಎಲ್‌, ಒಎನ್‌ಜಿಸಿ ಮತ್ತು ಇತರ ಖಾಸಗಿ ಸಂಸ್ಥೆಗಳ ಪ್ರಾಯೋಜಕತ್ವ ಜಿಲ್ಲಾಡಳಿತದ ಸಹಕಾರದೊಂದಿಗೆ ಗಾಳಿಪಟ ಉತ್ಸವ ಸಾರ್ವಜನಿಕರಿಗೆ ಮನರಂಜನೆ ನೀಡಲಿದೆ ಎಂದು ಟೀಮ್ ಮಂಗಳೂರು ತಂಡದ ಪ್ರಾಣ್, ಪ್ರಶಾಂತ್, ದಿನೇಶ್ ಹೊಳ್ಳ ಹಾಗೂ ಇತರರು ಮಾಹಿತಿ ನೀಡಿದ್ದಾರೆ.

error: Content is protected !!
Scroll to Top