ಸೂರ್ಯಕುಮಾರ್‌ ಯಾದವ್‌ ಜೊತೆ ಡೇಟಿಂಗ್‌ ಮಾಡಿದ್ದೇನೆ ಎಂದ ನಟಿಯ ಮೇಲೆ ಬಿತ್ತು 100 ಕೋ. ರೂ. ಮಾನನಷ್ಟ ಮೊಕದ್ದಮೆ

ಹಲವಾರು ಕ್ರಿಕೆಟರ್‌ಗಳು ನನ್ನ ಹಿಂದೆ ಬಿದ್ದಿದ್ದರು ಎಂದು ಬಡಾಯಿ ಕೊಚ್ಚಿದ್ದ ನಟಿ

ಮುಂಬೈ: ಟಿ20 ಭಾರತ ಕ್ರಿಕೆಟ್ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ವಿರುದ್ಧ ಹೇಳಿಕೆ ನೀಡಿದ್ದ ಬಾಲಿವುಡ್ ನಟಿ ಖುಷಿ ಮುಖರ್ಜಿಗೆ ಬಿಗ್ ಶಾಕ್ ಎದುರಾಗಿದ್ದು, ಆಕೆಯ ವಿರುದ್ಧ ಇದೀಗ 100 ಕೋಟಿ ರೂಗಳ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.

ಈ ಹಿಂದೆ ಖುಷಿ ಮುಖರ್ಜಿ ನನ್ನ ಹಿಂದೆ ಹಲವಾರು ಕ್ರಿಕೆಟರ್‌ಗಳು ಬಿದ್ದಿದ್ದರು. ಇದರಲ್ಲಿ ಕ್ಯಾಪ್ಟನ್‌ ಸೂರ್ಯಕುಮಾರ್‌ ನನ್ನ ಜೊತೆ ಸಾಕಷ್ಟು ಮೆಸೇಜ್‌ ವಿನಿಮಯ ಮಾಡಿದ್ದರು ಎಂದು ಹೇಳಿದ್ದರು. ಈ ಗಂಭೀರ ಆರೋಪದ ವಿರುದ್ಧ ಸಿಡಿದೆದ್ದಿರುವ ಸೂರ್ಯಕುಮಾರ್‌ ಅವರ ಮುಂಬೈ ಮೂಲದ ಅಭಿಮಾನಿ, ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್ ಫೈಜಾನ್‌ ಅನ್ಸಾರಿ ಎಂಬವರು ಖುಷಿ ಮುಖರ್ಜಿ ವಿರುದ್ಧ 100 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದೆಮೆ ಕೇಸ್‌ ಹಾಕಿದ್ದಾರೆ.





















































 
 

ಸೂರ್ಯಕುಮಾರ್‌ ಅವರ ಅಭಿಮಾನಿ ಮುಂಬೈನಿಂದ ಪ್ರಯಾಣ ಮಾಡಿ ಉತ್ತರ ಪ್ರದೇಶದ ಘಾಜಿಪುರದ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಖುಷಿ ಮುಖರ್ಜಿ ಮಾಡಿರುವ ಆರೋಪಗಳು ಸುಳ್ಳು ಮತ್ತು ಕೇವಲ ಪ್ರಚಾರಕ್ಕಾಗಿ ಸ್ಟಾರ್ ಆಟಗಾರನ ಖ್ಯಾತಿಗೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಘಾಜಿಪುರ ಎಸ್ಪಿ ಡಾ.ಇರಾಜ್ ರಾಜಾ ಅವರನ್ನು ಭೇಟಿ ಮಾಡಿ ಖುಷಿ ಮುಖರ್ಜಿಯನ್ನು ತಕ್ಷಣ ಬಂಧಿಸಬೇಕು ಹಾಗೂ ಕನಿಷ್ಠ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಬೇಕು ಒತ್ತಾಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅನ್ಸಾರಿ, ಖುಷಿ ಮುಖರ್ಜಿ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಬೇಕೆಂದು ನಾವು ಬಯಸುತ್ತೇವೆ. ನನ್ನ ಲಿಖಿತ ದೂರಿನಲ್ಲಿಯೂ ನಾನು ಇದನ್ನು ಉಲ್ಲೇಖಿಸಿದ್ದೇನೆ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದ್ದೇನೆ ಎಂದಿದ್ದಾರೆ.

ಯಾವುದೇ ಕ್ರಿಕೆಟ್‌ರ್‌ ಜೊತೆಗೆ ಡೇಟ್‌ ಮಾಡಲು ಇಷ್ಟವಿಲ್ಲ. ನನ್ನ ಹಿಂದೆ ಹಲವಾರು ಕ್ರಿಕೆಟರ್‌ಗಳು ಬಿದ್ದಿದ್ದರು. ಇದರಲ್ಲಿ ಕ್ಯಾಪ್ಟನ್‌ ಸೂರ್ಯಕುಮಾರ್‌ ನನ್ನ ಜೊತೆ ಸಾಕಷ್ಟು ಮೆಸೇಜ್‌ ವಿನಿಮಯ ಮಾಡಿದ್ದರು. ಆದರೆ ಮಾತುಕತೆ ಮಾಡಿಲ್ಲ ಎಂದು ಖುಷಿ ಮುಖರ್ಜಿ ಹೇಳಿದ್ದರು.

ಈ ಹಿಂದೆ ಇನ್‌ಸ್ಟಾಗ್ರಾಮ್‌ ಅನ್ನು ಹ್ಯಾಕ್‌ ಮಾಡಿದ್ದರು. ಮೊದಲು ಸೂರ್ಯಕುಮಾರ್‌ ಜೊತೆಗಿನ ಸಂದೇಶಗಳು ಫ್ರೆಂಡ್‌ಶಿಪ್‌ ಆಗಿತ್ತು. ಆದರೆ ಈಗ ಇಬ್ಬರ ನಡುವೆ ಯಾವುದೇ ಸಂಪರ್ಕವಿಲ್ಲ. ಇದು ವಿವಾದ ಆದ ಮೇಲೆ ಇಬ್ಬರು ಚರ್ಚೆ ಮಾಡಿಲ್ಲ ಎಂದು ಖುಷಿ ಮುಖರ್ಜಿ ಹೇಳಿದ್ದರು.

ಖುಷಿ ಮುಖರ್ಜಿ ಕೊಲ್ಕತ್ತಾ ನಗರದಲ್ಲಿ 1996ರ ನವೆಂಬರ್‌ 24 ರಂದು ಜನಿಸಿದ್ದರು. ಇವರು ಮೂತ್ರ ವಿಸರ್ಜನಾ ವರ್ಜಿನ್‌ ಹೈ, ಹಾರ್ಟ್‌ ಅಟ್ಯಾಕ್‌, ಅಂಜಲ್‌ ಥುರೈ ಮೂವಿಗಳಲ್ಲಿ ಅಭಿನಯ ಮಾಡಿದ್ದಾರೆ.

error: Content is protected !!
Scroll to Top