ಸುಮಂತ್ ಮೃತದೇಹ ‌ಸಿಕ್ಕ ಕೆರೆಯಲ್ಲಿ ನೀಲಿ ಬಣ್ಣದ ಟಾರ್ಚ್ ‌ಲೈಟ್ ಪತ್ತೆ

ಬೆಳ್ತಂಗಡಿ: ಧನು ಪೂಜೆಗೆಂದು ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಬಾಲಕ ಶವವಾಗಿ ಪತ್ತೆಯಾದ ಪ್ರಕರಣಕ್ಕೆ ‌ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಂಭೋಳ್ಯ ನಿವಾಸಿ ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ ಸುಮಂತ್ ಅಸಹಜವಾಗಿ ಮೃತಪಟ್ಟ ಬಾಲಕನಾಗಿದ್ದು, ಆತನ ತಲೆಯಲ್ಲಿ ಕತ್ತಿ ಅಥವಾ ಇನ್ಯಾವುದೋ ವಸ್ತುವಿನಿಂದ ಹೊಡೆದ ಮೂರು ಗಾಯಗಳಿರುವುದು ಮತ್ತು ಅರೆಪ್ರಜ್ಞಾವಸ್ಥೆಯಲ್ಲಿ ನೀರಿಗೆ ಬಿದ್ದು ಶ್ವಾಸಕೋಶದಲ್ಲಿ ‌ನೀರು ತುಂಬಿದ ಸಂಗತಿ ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿತ್ತು.

ಸದ್ಯ ಪೊಲೀಸರು ಆತನ ಮೃತ ದೇಹ ಸಿಕ್ಕ ಕೆರೆಯ ನೀರನ್ನು ಖಾಲಿ ಮಾಡಿ ತನಿಖೆ ನಡೆಸಿದ್ದು, ಅಲ್ಲಿ ಆತ ತೆಗೆದುಕೊಂಡು ಹೋಗಿದ್ದ ನೀಲಿ ಬಣ್ಣದ ಟಾರ್ಚ್ ಲೈಟ್ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.





















































 
 

error: Content is protected !!
Scroll to Top