ಪುತ್ತೂರು: ರಿಕ್ಷಾ ಚಾಲಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆರ್ಯಾಪು ಗ್ರಾಮದ ಪಿಲಿಗುಂಡದಲ್ಲಿ ನಡೆದಿದೆ.
ಮೃತರನ್ನು ಗೋಪಾಲ ನಾಯ್ಕ (55) ಎಂದು ಗುರುತಿಸಲಾಗಿದೆ.
ರಾತ್ರಿ ವೇಳೆ ಮಲಗಿದ್ದ ಇವರು ಬೆಳಗ್ಗೆ ಮನೆ ಮಂದಿ ನೋಡುವ ಸಮಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಇವರು ಪುತ್ತೂರು ಬಸ್ಸು ನಿಲ್ದಾಣದ ಸಮೀಪ ರಿಕ್ಷಾ ಬಾಡಿಗೆ ಮಾಡುತ್ತಿದ್ದರು. ಪುತ್ತೂರು ಸಹಕಾರಿ ಸಂಘದಲ್ಲಿ ರಿಕ್ಷಾದ ಸಾಲದ ಕಂತು, ರಿಕ್ಷಾದ ವಿಮೆ ಪಾವತಿ ಸಹ ಬಾಕಿ ಇತ್ತು. ಈ ಹಿನ್ನೆಲೆ ಸದ್ಯ ಇವರ ರಿಕ್ಷಾ ವನ್ನು ಸೀಜ್ ಮಾಡಲಾಗಿದೆ. ಈ ಘಟನೆಯಿಂದ ನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಂಶಯಿಸಲಾಗಿದೆ.
ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
























