ಜ.25: ಗೌಡ ಸಮಾಜದಿಂದ ‘ಸಪ್ತಪದಿ – 2026’ ಕಾರ್ಯಕ್ರಮ

ಮಡಿಕೇರಿ: ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ (ರಿ) ಬೆಂಗಳೂರು ಇದರ ವತಿಯಿಂದ, ಮಹಿಳಾ ಘಟಕ ಮತ್ತು ಯುವ ಘಟಕದ ಸಹಯೋಗದೊಂದಿಗೆ ಜ. 25 ರಂದು ಭಾನುವಾರ ಬೆಳಗ್ಗೆ ‘ಸಪ್ತಪದಿ -2026’ ಭಾವೀ ವಧೂ ರವರ ಮುಖಾಮುಖಿ ಭೇಟಿ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮವು ಬೆಂಗಳೂರಿನ ‘ನಮ್ಮನೆ ಸಾಂಸ್ಕೃತಿಕ ಕಲಾ ಕೇಂದ್ರ’ 50 ಅಡಿ, ಅಂದಾನಪ್ಪ ರಸ್ತೆ, 8ನೇ ಅಡ್ಡ ರಸ್ತೆ, ಚೌಡೇಶ್ವರಿ ನಗರ, ಲಾಯರ್ ಶ್ರೀ ಪೂಜಾರಿರ ಎ. ಮೊಣ್ಣಪ್ಪ ಬಡಾವಣೆ, ಲಗ್ಗೆರೆಯಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಹತ್ತು ಕುಟುಂಬದ ಹದಿನೆಂಟು ಗೋತ್ರದ ಗೌಡ ಜನಾಂಗದ ಭಾವೀ ವಧೂವರರು, ಅವರ ಪೋಷಕರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





















































 
 

error: Content is protected !!
Scroll to Top