ಭಾರತೀಯ ಸೇನೆಯ ಸಾಮರ್ಥ್ಯದ ಬಗ್ಗೆ ಸೇನಾ ಮುಖ್ಯಸ್ಥರು ಹೇಳಿದ್ದೇನು ಗೊತ್ತಾ?

ನವದೆಹಲಿ: ಪಾಕಿಸ್ತಾನದ ಗಡಿ ಭಾಗಗಳಲ್ಲಿ ಭಾರತದ ಎಚ್ಚರಿಕಾ ಕಣ್ಗಾವಲು ನಿರಂತರವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ತಿಳಿಸಿದ್ದಾರೆ.

ಭಾರತೀಯ ಸೇನಾ ದಿನಾಚರಣೆಗೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ‌ಮಾತನಾಡಿದ ಅವರು, ದೇಶದ ಭದ್ರತಾ ವ್ಯವಸ್ಥೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಭಯೋತ್ಪಾದನೆಯ ‌ವಿರುದ್ಧದ ಕಾರ್ಯಾಚರಣೆ ಮತ್ತು ಸೇನೆಯ ಭವಿಷ್ಯದ ಯೋಜನೆಗಳ ಕುರಿತು ಅವರು ಸ್ಪಷ್ಟ ಮಾಹಿತಿ ನೀಡಿರುವುದಾಗಿದೆ.

ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಸಮೀಪ ಎಂಟು ಭಯೋತ್ಪಾದಕ ಶಿಬಿರಗಳು ನಡೆಯುತ್ತಿರುವ ಮಾಹಿತಿ ಇದ್ದು, ಅವುಗಳ ಮೇಲೆ ಕಣ್ಣಿಡಲಾಗಿದೆ. ಎಂತಹ ದುಷ್ಕೃತ್ಯ ನಡೆದರೂ ತಕ್ಷಣದಲ್ಲೇ ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೇನೆ ಸನ್ನದ್ಧವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.





















































 
 

ಉತ್ತರ ಗಡಿಗಳಲ್ಲಿ ಚೀನಾ ಇರುವ ಸ್ಥಿತಿ ಕ್ರಮೇಣ ಸಹಜವಾಗುತ್ತಿದ್ದು, ಉಭಯ ದೇಶಗಳ ಉನ್ನತ ಮಟ್ಟದ ಮಾತುಕತೆಗಳು ಸ್ಥಿರತೆಗೆ ಸಹಕಾರಿಯಾಗಿವೆ. ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪಹಲ್ಗಾಮ್ ದಾಳಿಯ ಬಳಿಕ ತ್ವರಿತವಾಗಿ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದಿದ್ದಾರೆ.

ಮಣಿಪುರ ಹಾಗೂ ಈಶಾನ್ಯ ಪ್ರದೇಶಗಳಲ್ಲಿ ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದ್ದು ಸರ್ಕಾರ ಮತ್ತು ಭದ್ರತಾ ಪಡೆಗಳ ಸಂಯುಕ್ತ ಪ್ರಯತ್ನ ಫಲ ನೀಡುತ್ತಿದೆ. ಭಾರತೀಯ ಸೇನೆಯ ಆಧುನೀಕರಣದ ಭಾಗವಾಗಿ ಸುಧಾರಿತ ಕ್ಷಿಪಣಿಗಳು, ಡೋನ್‌ಗಳು ಮತ್ತು ಯುದ್ಧೋಪಕರಣಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ಹೆಚ್ಚಿನ ಮದ್ದುಗುಂಡುಗಳನ್ನು ದೇಶದಲ್ಲೇ ಉತ್ಪಾದಿಸಲಾಗುತ್ತಿದೆ. ಹಾಗೆಯೇ 2026 ಅನ್ನು ನೆಟ್‌ವರ್ಕ್ ಮತ್ತು ಡೇಟಾ ಆಧಾರಿತ ಕಾರ್ಯಾಚರಣೆಗಳ ವರ್ಷ ಎಂದು ಘೋಷಿಸಿರುವುದಾಗಿ ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ.

error: Content is protected !!
Scroll to Top