ಪುತ್ತೂರು: ಪ್ರೀತಿಯಿಂದ ಸಾಕಿದ್ದ ಶ್ವಾನವೊಂದು ಕಾಣೆಯಾಗಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾವು ಪ್ರೀತಿಯಿಂದ ಸಾಕಿದ್ದ ಶಿಟ್ಝೂ ತಳಿಯ ನಾಯಿ ಬಾಬ್ರೂ ಕಾಣೆಯಾಗಿರುವುದಾಗಿ ದೂರಿನಲ್ಲಿ ಪೂನಂ ಶೆಟ್ಟಿ ಎಂಬವರು ದೂರಿನಲ್ಲಿ ತಿಳಿಸಿದ್ದಾರೆ.
ನೆಲ್ಲಿಕಟ್ಟೆಯ ಮಲ್ಯ ಕಾಂಪೌಂಡ್‌ನಿಂದ ನಾಯಿ ಕಾಣೆಯಾಗಿದೆ. ನಾಯಿಯ ಕೆಲವು ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿರುವುದಾಗಿಯೂ ಅವರು ದೂರಿನಲ್ಲಿ ಹೇಳಿದ್ದಾರೆ.
























