ಬಾಂಗ್ಲಾದೇಶದಲ್ಲಿ ಇನ್ನೋರ್ವ ಹಿಂದೂ ವ್ಯಕ್ತಿಯ ಹತ್ಯೆ

ರಿಕ್ಷಾ ಚಾಲಕನನ್ನು ಕೊಂದು ಹೊಲದಲ್ಲಿ ಎಸೆದ ದುಷ್ಕರ್ಮಿಗಳು

ಢಾಕಾ : ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯಾ ಸರಣಿ ಮುಂದುವರಿದಿದೆ. ದಕ್ಷಿಣ ಬಾಂಗ್ಲಾದ ಫೆನಿ ಜಿಲ್ಲೆಯ ಧಗನ್​ಭುಯಾನ್​ನಲ್ಲಿ ಅಪರಿಚಿತ ದುಷ್ಕರ್ಮಿಗಳು 28 ವರ್ಷದ ಆಟೋ ಚಾಲಕನನ್ನು ಇರಿದು ಹತ್ಯೆ ಮಾಡಿದ್ದಾರೆ. ಸಮೀರ್ ಕುಮಾರ್ ದಾಸ್ ಮೃತ ವ್ಯಕ್ತಿ. ಆಟೋ ಚಾಲಕನನ್ನು ಕೊಂದು ಆಟೋವನ್ನು ಕೂಡ ಕಳವು ಮಾಡಲಾಗಿದೆ. ಕುಟುಂಬದವರ ಪ್ರಕಾರ, ಸಮೀರ್ ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಆಟೋರಿಕ್ಷಾದಲ್ಲಿ ಮನೆಯಿಂದ ಹೊರಟಿದ್ದರು, ತಡರಾತ್ರಿಯಾದರೂ ಅವನು ಹಿಂತಿರುಗದಿದ್ದಾಗ, ಕುಟುಂಬದವರು ಅವರನ್ನು ಹುಡುಕಲು ಪ್ರಾರಂಭಿಸಿದ್ದರು.

ಸೋಮವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಜಗತ್ಪುರ ಗ್ರಾಮದ ಹೊಲವೊಂದರಲ್ಲಿ ಸ್ಥಳೀಯರು ಅವರ ಶವವನ್ನು ಪತ್ತೆ ಮಾಡಿದ್ದಾರೆ. ದಗನ್ಭುಯಾನ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ಸಮೀರ್ ಹತ್ಯೆಗೆ ಮನೆಯಲ್ಲಿ ತಯಾರಿಸಿದ ಆಯುಧಗಳನ್ನು ಬಳಸಲಾಗಿದೆ.





















































 
 

ಪ್ರಾಥಮಿಕ ತನಿಖೆಗಳು ಕೊಲೆ ಪೂರ್ವ ಯೋಜಿತ ಎಂದು ಕಂಡುಬರುತ್ತಿದೆ. ತನಿಖೆ ಮುಂದುವರಿದಿದ್ದು, ಇನ್ನೂ ಯಾರನ್ನೂ ಬಂಧಿಸಿಲ್ಲ. ಬಾಂಗ್ಲಾದೇಶದಲ್ಲಿ 23 ದಿನಗಳಲ್ಲಿ ನಡೆದ ಏಳನೇ ಹಿಂದೂ ಹತ್ಯೆ ಇದಾಗಿದೆ. ಇದಕ್ಕೂ ಮೊದಲು, ಜನವರಿ 5 ರಂದು, ಬಾಂಗ್ಲಾದೇಶದ ನರಸಿಂಗ್ಡಿ ಜಿಲ್ಲೆಯಲ್ಲಿ ಹಿಂದೂ ವ್ಯಕ್ತಿಯನ್ನು ಹರಿತವಾದ ಆಯುಧಗಳಿಂದ ಇರಿದು ಹತ್ಯೆ ಮಾಡಲಾಗಿತ್ತು. ಮೃತ ವ್ಯಕ್ತಿ 40 ವರ್ಷದ ಶರತ್ ಚಕ್ರವರ್ತಿ ಮಣಿ.

ಜನವರಿ 6ರಂದು ಬಾಂಗ್ಲಾದೇಶದ ನೌಗಾಂವ್ ಜಿಲ್ಲೆಯಲ್ಲಿ 25 ವರ್ಷದ ಹಿಂದೂ ವ್ಯಕ್ತಿಯೊಬ್ಬ ಕಾಲುವೆಗೆ ಹಾರಿ ಸಾವನ್ನಪ್ಪಿದ್ದ. ಮೃತನನ್ನು ಭಂಡಾರ್‌ಪುರ ಗ್ರಾಮದ ನಿವಾಸಿ ಮಿಥುನ್ ಸರ್ಕಾರ್ ಎಂದು ಗುರುತಿಸಲಾಗಿದ್ದು, ಕಳ್ಳತನದ ಆರೋಪ ಹೊರಿಸಿ ಸ್ಥಳೀಯರು ಆತನನ್ನು ಬೆನ್ನಟ್ಟಿದ್ದರು.

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳು ಮತ್ತು ಅವರ ಆಸ್ತಿಗಳ ಮೇಲೆ ಪದೇ ಪದೆ ದಾಳಿಗಳು ನಡೆಯುತ್ತಿವೆ. ಆತಂಕಕಾರಿಯಾಗಿದೆ. ಬಾಂಗ್ಲಾದೇಶದ ಮಧ್ಯಂತರ ನಾಯಕ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್, ಭಾರತದ ಆರೋಪಗಳನ್ನು ಉತ್ಪ್ರೇಕ್ಷೆ ಎಂದು ಕರೆದು ತೇಲಿಸಿ ಬಿಡುತ್ತಿದ್ದಾರೆ.

error: Content is protected !!
Scroll to Top