EOS-N1 ‘ಅನ್ವೇಷಾ’ ನಭಕ್ಕೆ: ಇಸ್ರೋ ಮುಡಿಗೆ ಮತ್ತೊಂದು ಹೆಮ್ಮೆಯ ಗರಿ

ಬೆಂಗಳೂರು: ದೇಶದ ಹೆಮ್ಮೆಯ ಇಸ್ರೋ ಮತ್ತೊಂದು ಮಹತ್ವದ ಮೈಲಿಗಲ್ಲು ದಾಖಲಿಸಿದೆ. 2026 ರ ಮೊದಲ ಬಾಹ್ಯಾಕಾಶ ಮಿಷನ್ ‘ಅನ್ವೇಷಾ’ ಉಪಗ್ರಹವನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಕಳುಹಿಸಿದೆ.

PSLV -C62 ರಾಕೆಟ್ ಮೂಲಕ EOS-N1 ‘ಅನ್ವೇಷಾ’ ಉಪಗ್ರಹವನ್ನು ಉಡಾಯಿಸಲಾಗಿದೆ. ಇದನ್ನು ಡಿಆರ್‌ಡಿಒ ಅಭಿವೃದ್ಧಿ ಮಾಡಿದ್ದು, ಕಣ್ಗಾವಲು ಮತ್ತು ರಕ್ಷಣಾ ಉದ್ದೇಶಗಳಿಗೆ ಇದು ಬಳಕೆಯಾಗಲಿದೆ. 600 km ಎತ್ತರದ ಕಕ್ಷೆಯಲ್ಲಿ 400 kg ತೂಕದ ಈ ಉಪಗ್ರಹ ಭೂಮಿಯನ್ನು ಸುತ್ತಲಿದೆ.

ಈ ಉಪಗ್ರಹ ಸಾಮಾನ್ಯ ಉಪಗ್ರಹಗಳಿಗಿಂತ ಭಿನ್ನವಾಗಿದೆ. ವಸ್ತುಗಳ ಬಣ್ಣದ ಜೊತೆಗೆ ಅವುಗಳ ‘ಸ್ಪೆಕ್ಟಲ್ ಸಿಗ್ನೆಚ‌ರ್’ ಅನ್ನು ಗುರುತಿಸುವ ಸಾಮರ್ಥ್ಯ ಹೊಂದಿದೆ. ಇದರ ಮೂಲಕ ಗಡಿ ಪ್ರದೇಶಗಳಲ್ಲಿ ಶತ್ರುಗಳ ಚಲನವಲನ, ಹೊಸ ಕಟ್ಟಡ ನಿರ್ಮಾಣ, ಕ್ಷಿಪಣಿ ಉಡಾವಣಾ ತಾಣಗಳು ಹಾಗೂ ಭೂಗತ ಚಟುವಟಿಕೆಗಳನ್ನು ನಿಖರವಾಗಿ ಪತ್ತೆಹಚ್ಚಬಹುದು. ಪಾಕಿಸ್ತಾನ ಮತ್ತು ಚೀನಾ ಗಡಿಗಳ ಮೇಲಿನ ನಿಗಾವನ್ನು ಇನ್ನಷ್ಟು ಬಲಪಡಿಸುವಲ್ಲಿ ಅನ್ವೇಷಾ ಮಹತ್ವದ ಪಾತ್ರ ವಹಿಸಲಿದೆ. ರಕ್ಷಣೆಯ ಹೊರತಾಗಿ ಕೃಷಿ, ಮಣ್ಣಿನ ತೇವಾಂಶ, ಮಾಲಿನ್ಯ ಮೇಲ್ವಿಚಾರಣೆ ಹಾಗೂ ಖನಿಜ ಸಂಪನ್ಮೂಲ ಗುರುತಿಸುವಲ್ಲಿಯೂ ಈ ಉಪಗ್ರಹ ಬಳಕೆಯಾಗಲಿದೆ. ಭಾರತದ ‘ಬಾಹ್ಯಾಕಾಶದ ಕಣ್ಣು’ ಎಂದು ಅನ್ವೇಷಾವನ್ನು ಕರೆಯಲಾಗುತ್ತಿದೆ.





















































 
 

error: Content is protected !!
Scroll to Top