ಶಬರಿಮಲೆ ದೇಗುಲದ ಚಿನ್ನ ಕಳ್ಳತನ ಪ್ರಕರಣ : ಮುಖ್ಯ ಅರ್ಚಕ ಬಂಧನ

ಭಾರಿ ಪ್ರಮಾಣದ ಚಿನ್ನ ಕಳ್ಳತನವಾಗಿರುವ ಶಂಕೆ

ತಿರುವನಂತಪುರಂ: ಶಬರಿಮಲೆ ದೇಗುಲದ ಚಿನ್ನ ಕಳ್ಳತನ ಪ್ರಕರಣದ ಮಹತ್ವದ ಬೆಳವಣಿಯಲ್ಲಿ ಎಸ್‌ಐಟಿ ಅಧಿಕಾರಿಗಳು ದೇಗುಲದ ಪ್ರಧಾನ ಅರ್ಚಕನನ್ನು ಅರೆಸ್ಟ್ ಮಾಡಿದ್ದಾರೆ. ಕಂಡರಾರು ರಾಜೀವ್ ಬಂಧಿತ ಆರೋಪಿಯಾಗಿದ್ದು, ದೇಗುಲದ ಪ್ರಧಾನ ಅರ್ಚಕನಾಗಿ ಕೆಲಸ ಮಾಡುತ್ತಿದ್ದರು.

ಚಿನ್ನ ಕಳ್ಳತನದ ಹಿಂದೆ ದೊಡ್ಡ ಸಂಚು ಮತ್ತು ಮಧ್ಯವರ್ತಿಗಳ ಲಿಂಕ್ ಇರುವ ಬಗ್ಗೆ ಎಸ್‌ಐಟಿ ಶಂಕೆ ವ್ಯಕ್ತಪಡಿಸಿದೆ. ಕಂಡರಾರು ರಾಜೀವ್, ತಂತ್ರಿ ಉಣ್ಣಿಕೃಷ್ಣನ್ ಪೊಟ್ಟಿಯವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ದೇವಸ್ಥಾನದ ಫಲಕಗಳಿಗೆ ಚಿನ್ನ ಲೇಪಿಸುವ ನೆಪದಲ್ಲಿ ನಡೆದ ಪ್ರಾಯೋಜಕತ್ವದ ನಂತರ ಚಿನ್ನದ ಕಳ್ಳತನಕ್ಕೆ ಕಾರಣವಾಯಿತು ಎಂಬ ಆರೋಪ ಕೇಳಿಬಂದಿದೆ. ಫಲಕಗಳಿಗೆ ಚಿನ್ನ ಲೇಪಿಸಲು ಕಂಡರಾರು ರಾಜೀವ್ ಅನುಮತಿ ನೀಡಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಕಳೆದ ನವೆಂಬರ್‌ನಲ್ಲಿಯೇ ಎಸ್‌ಐಟಿ ರಾಜೀವ್‌ ಅವರಿಂದ ಮಾಹಿತಿ ಸಂಗ್ರಹಿಸಿತ್ತು.





















































 
 

ಎಸ್‌ಐಟಿ ಮಾಹಿತಿ ಪ್ರಕಾರ, ದೇಗುಲ ಬಿಡುವುದಕ್ಕೂ ಮೊದಲು 2019ರ ಜುಲೈನಲ್ಲಿ ಚಿನ್ನದ ತೂಕ ಮಾಡಿದಾಗ 42.8 ಕೆಜಿ ಇತ್ತು. ಆದರೆ ಅದು ಕೇರಳದಿಂದ ಚೆನ್ನೈನಲ್ಲಿರುವ ಸ್ಮಾರ್ಟ್ ಕ್ರಿಯೇಷನ್ಸ್ ತಲುಪಿದ ಬಳಿಕ ತೂಕ 38.25 ಕೆ.ಜಿ ಆಗಿತ್ತು. ಅಂದರೆ ಅಯ್ಯಪ್ಪನ ಗುಡಿ ಚಿನ್ನದ ಬಾಗಿಲು ಹಾಗೂ ದ್ವಾರಪಾಲಕರು ಕೇರಳದಿಂದ ಚೆನ್ನೈ ತಲುಪುವುದರೊಳಗೆ 39 ಕೆಜಿ ಆಗಿತ್ತಂತೆ. ಪ್ರಯಾಣದ ನಡುವೆ ಕೇರಳ, ಕರ್ನಾಟಕ, ಆಂಧ್ರ ಕೆಲವು ಪ್ರಭಾವಿಗಳ ಮನೆಯಲ್ಲಿ ಪೂಜೆ ಮಾಡಿಸಲಾಗಿದೆ. ಈ ಗ್ಯಾಪ್‌ನಲ್ಲಿ ಚಿನ್ನ ಎಗರಿಸಿದ್ದಾರೆ ಎನ್ನಲಾಗಿದೆ.

2019ರಲ್ಲಿ ಅಯ್ಯಪ್ಪ ಸ್ವಾಮಿಯ ದೇಗುಲದ ಎರಡು ಬಾಗಿಲು ಹಾಗೂ 2 ದ್ವಾರಪಾಲಕರಿಗೆ ಚಿನ್ನ ಮರು ಲೇಪನ ಮಾಡಲು ಯೋಜಿಸಲಾಗಿತ್ತು. ತಮಿಳುನಾಡು ಮೂಲದ ಸ್ಮಾರ್ಟ್ ಕ್ರಿಯೇಷನ್ಸ್ ಸಂಸ್ಥೆ ಉಚಿತವಾಗಿ ಚಿನ್ನ ಮರುಲೇಪನ ಮಾಡೋದಾಗಿ ಮನವಿ ಮಾಡಿದ್ದರಿಂದ ಅದೇ ಕಂಪನಿಗೆ ಕೆಲಸ ಕೊಡಲಾಗಿತ್ತು.

error: Content is protected !!
Scroll to Top