ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧವಾದ ಮಹಿಳೆಯ ಮನವೊಲಿಸಿದ ಡೆಲಿವರಿ ಬಾಯ್

ಚೆನ್ನೈ: ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಮಹಿಳೆಯೊಬ್ಬರು ‌ಮಧ್ಯರಾತ್ರಿ ವೇಳೆ ಬ್ಲಿಂಕಿಟ್ ಮೂಲಕ ಇಲಿಪಾಶಾಣ ಆರ್ಡರ್ ಮಾಡಿದ್ದು, ಆರ್ಡರ್ ತಂದು ಕೊಡಲು ಬಂದ ಡೆಲಿವರಿ ಬಾಯ್ ಆಕೆಯ ಜೀವ ಉಳಿಸಿದ ಘಟನೆ ನಡೆದಿದೆ.

ಈ ವಿಷಯವನ್ನು ಡೆಲಿವರಿ ಕೊಡಲು ಹೋಗಿ, ಮಹಿಳೆಯ ಮನಃಪರಿವರ್ತನೆ ಮಾಡಿದ ಯುವಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮಧ್ಯರಾತ್ರಿ ಇಲಿ ಪಾಷಾಣದ ಆರ್ಡರ್ ಸಿಕ್ಕಾಗ ನನಗೆ ಅನುಮಾನ ಬಂತು. ಆ ಪಾರ್ಸೆಲ್ ಡೆಲಿವರಿಗೆ ಹೋದಾಗ ಆರ್ಡರ್ ಮಾಡಿದ ಮಹಿಳೆ ಅಳುತ್ತಾ ಬಾಗಿಲು ತೆರೆದರು. ತಾನು ಡೆಲಿವರಿ ನೀಡಿ ಹೊರಗೆ ಹೋಗದೆ ಅವರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕಾರಣ ಏನು ಎಂದು ಕೇಳಿದೆ. ಹಾಗೆಯೇ, ಸಮಸ್ಯೆ ಪರಿಹಾರಕ್ಕೆ ಆತ್ಮಹತ್ಯೆಯೇ ಮಾರ್ಗ ಅಲ್ಲ. ಅಂತಹ ನಿರ್ಣಯ ತೆಗೆದುಕೊಳ್ಳಬೇಡಿ. ಕಷ್ಟದ ಕ್ಷಣಗಳು ಶಾಶ್ವತವಲ್ಲ, ಅದು ಕಳೆದು ಹೋಗುತ್ತದೆ ಎಂದು ತಿಳಿಸಿದೆ.

ಹಾಗೆಯೇ ಇಲಿಗಳ ಕಾಟವಿದ್ದರೆ ಮಧ್ಯರಾತ್ರಿ ವಿಷಕ್ಕೆ ಆರ್ಡರ್ ಮಾಡುತ್ತಿರಲಿಲ್ಲ. ಇಲಿಪಾಷಾಣದ ಆರ್ಡರ್ ಕ್ಯಾನ್ಸಲ್ ಮಾಡಿಸಿದೆ ಎಂದು ಹೇಳಿದ್ದಾರೆ. ನಾನು ಯಾವುದೋ ದೊಡ್ಡ ಸಾಧನೆ ಮಾಡಿದ್ದೇನೆ ಎಂಬ ತೃಪ್ತಿ ಇದೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಹಾಗೆಯೇ, ಈ ಯುವಕನ ಕಾರ್ಯಕ್ಕೆ ನೆಟ್ಟಿಗರಿಂದಲೂ ಶ್ಲಾಘನೆ ವ್ಯಕ್ತವಾಗಿದೆ.





















































 
 
error: Content is protected !!
Scroll to Top