ವಿಟ್ಲ: ತಾಯಿ ಮತ್ತು ಮಗಳು ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾರಮ್ಮ ಮತ್ತು ನೆಫಿಸತುಲ್ ಮಿಶ್ರಿಯಾ ಅವರು ನಾಪತ್ತೆಯಾಗಿರುವುದಾಗಿ ಸಾರಮ್ಮ ಅವರ ಪುತ್ರ ಕೊಳ್ಳಾಡು ಅಗರಿ ಮನೆ ಸಾಲೆತ್ತೂರು ನಿವಾಸಿ ಮಹಮ್ಮದ್ ಮುಸ್ತಫಾ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ‘ಜ. 5 ರಂದು ಬೆಳಗ್ಗೆ ತಾನು ನಾಟೆಕಲ್ ಮದ್ರಸಾಗೆ ಪಾಠ ಮಾಡಲು ಹೋಗಿದ್ದು, ಹಿಂದಿರುಗಿ ಬಂದಾಗ ತಾಯಿ ಮತ್ತು ಅಕ್ಕ ಮನೆಯಲ್ಲಿದ್ದರು. ಆದರೆ ಸಂಜೆ ವೇಳೆ ಇರಾದಿಂದ ಪತ್ನಿಯನ್ನು ತವರು ಮನೆಯಿಂದ ಕರೆದುಕೊಂಡು ಬರುವ ವೇಳೆ ಮನೆಯ ಬಾಗಿಲಿಗೆ ಬೀಗ ಹಾಕಿತ್ತು. ಮನೆಯ ಬೀಗವನ್ನು ಪಕ್ಕದ ಮನೆಯಲ್ಲಿ ನೀಡಿದ್ದರು. ರಾತ್ರಿಯಾದರೂ ತಾಯಿ ಮತ್ತು ಅಕ್ಕ ಮನೆಗೆ ಬಾರದೇ ಇದ್ದು ಸಂಬಂಧಿಕರು, ಊರವರ ಬಳಿ ವಿಚಾರಿಸಲಾದರೂ ಯಾವುದೇ ಸುಳಿವು ಸಿಕ್ಕಿರುವುದಿಲ್ಲ ಎಂದು ತಿಳಿಸಿದ್ದಾರೆ.
ವಿಟ್ಲ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
























