ಮಹಾಭಾರತ ಸರಣಿಯ 104ನೇ ತಾಳಮದ್ದಳೆ, ಸಿಂಹಬಲ ಕೀಚಕ

ಉಪ್ಪಿನಂಗಡಿ: ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದ 22ನೇ ವರ್ಷದ ದೀಪೋತ್ಸವದ ಪ್ರಯುಕ್ತ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಕಾಳಿಕಾಂಬ ವೇದಿಕೆಯಲ್ಲಿ ಸಿಂಹಬಲ ಕೀಚಕ ತಾಳಮದ್ದಳೆ ಜರಗಿತು.

ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟ್ ರಿ. ಇದರ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ ಕವಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಪ್ರಸಂಗದಲ್ಲಿ ಭಾಗವತರಾಗಿ ಪದ್ಮನಾಭ ಕುಲಾಲ್, ಸುರೇಶ ರಾವ್ ಬಿ., ಹಿಮ್ಮೇಳದಲ್ಲಿ ಶ್ರೀಪತಿ ಭಟ್, ಚಂದ್ರ ಶೇಖರ ಆಚಾರ್ಯ ಗೇರುಕಟ್ಟೆ, ಮೋಹನ ಶರವೂರು,ದಿವಾಕರ ಆಚಾರ್ಯ ನೇರೆಂಕಿ, ಪ್ರಚೇತ್ ಆಳ್ವ ಬಾರ್ಯ ಸಹಕರಿಸಿದರು.

ಅರ್ಥಧಾರಿಗಳಾಗಿ ಜಬ್ಬಾರ್ ಸಮೋ(ಕೀಚಕ), ಅಂಬಾ ಪ್ರಸಾದ್ ಪಾತಾಳ(ಸುಧೇಶ್ನೆ), ದಿವಾಕರ ಆಚಾರ್ಯ ಗೇರುಕಟ್ಟೆ(ವಿರಾಟ), ಗೀತಾ ಕುದ್ದಣ್ಣಾಯ(ಮಾತಂಗ), ಸತೀಶ್ ಶಿರ್ಲಾಲು(ರಥಕಾರ ), ಜಯರಾಮ ಬಲ್ಯ (ಭೀಮಸೇನ), ಶ್ರೀಧರ ಎಸ್. ಪಿ. ಕೃಷ್ಣಾಪುರ(ಚಾರುದತ್ತ), ದಿವಾಕರ ಆಚಾರ್ಯ ನೇರೆಂಕಿ(ಶ್ವೇತ), ಶ್ರುತಿ ವಿಸ್ಮಿತ್ ಬಲ್ನಾಡು(ಶಂಖ) ಭಾಗವಹಿಸಿದ್ದರು.





















































 
 

ಕಾರ್ಯಕ್ರಮದಲ್ಲಿ ಕಲಾಪೋಷಕ ಉಮೇಶ ಶೆಣೈ ರಾಮನಗರ, ಪೆರಿಯಡ್ಕ ಸಾಂಸ್ಕೃತಿಕ ಕೇಂದ್ರದ ಸಂಚಾಲಕ ಮಹಾಲಿಂಗೇಶ್ವರ ಭಟ್, ಎಂ. ದುರ್ಗಾ ಮಣಿ, ಉಪ್ಪಿನಂಗಡಿ ಯಕ್ಷದ್ರುವ ಪಟ್ಲ ಫೌಂಡೇಶನ್ ಅಧ್ಯಕ್ಷ ಜಗದೀಶ ಶೆಟ್ಟಿ ಕೆ., ಸುಧಾಕರ ಕೋಟೆ , ಸುರೇಶ್ ಪುತ್ತೂರಾಯ, ಬಿ. ಸುಬ್ರಹ್ಮಣ್ಯರಾವ್, ಡಾ. ಕೈಲಾರು ರಾಜಗೋಪಾಲ್ ಭಟ್, ಹರೀಶ ಆಚಾರ್ಯ ಮದ್ದಡ್ಕ, ನರಸಿಂಹ ಪ್ರಭು, ಸಂಜೀವ ಪಾರೆಂಕಿ, ಸಂಜೀವ ಕೆಮ್ಮಾರ ಮತ್ತು ಅಯ್ಯಪ್ಪ ಭಕ್ತವೃಂದದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಟ್ರಸ್ಟಿನ ಕಾರ್ಯದರ್ಶಿ ಶ್ರೀಪತಿ ಭಟ್ ಕಾರ್ಯಕ್ರಮ ಸಂಯೋಜಿಸಿದ್ದರು. ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ, ವಂದಿಸಿದರು.

error: Content is protected !!
Scroll to Top