ಚಿಕ್ಕಮಗಳೂರು: ಹಣಕ್ಕಾಗಿ ತಂದೆಯೇ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ದೂಡಿದ ಘಟನೆ ಬಿರೂರು ಹೋಬಳಿಯ ಗ್ರಾಮವೊಂದರಲ್ಲಿ ನಡೆದಿದೆ.
ಆರೋಪಿ ತಂದೆ ಗಿರೀಶ್ ಮತ್ತು ಆರೋಪಿ ಅಜ್ಜಿ ನಾಗರತ್ನ ಸೇರಿ ತಾಯಿ ಇಲ್ಲದ ಬಾಲಕಿಯನ್ನು ವೇಶ್ಯಾವಾಟಿಕೆ ದಂಧೆಗೆ ದೂಡಿರುವುದಾಗಿದೆ.
ಆರೋಪಿಗಳು ಭರತ್ ಎಂಬಾತನ ಜೊತೆ ಸೇರಿ 16 ವರ್ಷದ ಬಾಲಕಿಯನ್ನು ಮಂಗಳೂರಿಗೆ ಕರೆದೊಯ್ದು ಸುಮಾರು ಆರು ದಿನಗಳ ಕಾಲ 10 ಕ್ಕೂ ಹೆಚ್ಚು ಕಾಮಾಂಧರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದ್ದಾರೆ. ಆಕೆ ಋತುಮತಿ ಎಂಬುದನ್ನೂ ಪರಿಗಣಿಸದೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿದೆ.
ಆಕೆ ಮಂಗಳೂರಿನಿಂದ ಮರಳಿ ತನ್ನೂರಿಗೆ ಬಂದು ಈ ವಿಚಾರವನ್ನು ಧೈರ್ಯದಿಂದ ತನ್ನ ಚಿಕ್ಕಪ್ಪ ಮತ್ತು ಅತ್ತೆೆಗೆ ತಿಳಿಸಿದ್ದಾಳೆ. ಅವರ ಮೂಲಕ ಬಿರೂರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
























