ಶಾಲೆಯ ಅಡುಗೆ ಸಿಬ್ಬಂದಿ ಬೆಂಕಿ ತಗುಲಿ‌ ಸಾವು

ಕಾಸರಗೋಡು: ಬಂಗ್ರ ಮಂಜೇಶ್ವರ ಸರ್ಕಾರಿ ಪ್ರೌಢಶಾಲೆಯ ಅಡುಗೆ ಕೆಲಸಗಾರ್ತಿ ಬೆಂಕಿ ತಗುಲಿ ಮೃತಪಟ್ಟ ಘಟನೆ ನಡೆದಿದೆ.

ಉದ್ಯಾವರ ಮಾಡ ನಿವಾಸಿ ಜಯಾ (56) ಎಂಬವರೇ ‌ಮೃತ ದುರ್ದೈವಿ.

ಶಾಲೆಯಲ್ಲಿ ಮಧ್ಯಾಹ್ನದ ಆಹಾರ ತಯಾರಿಸುವ ವೇಳೆ ಸ್ಟವ್‌ನಿಂದ ಬೆಂಕಿ ತಗುಲಿದೆ. ಅವರ ಚೀರಾಟ ಕೇಳಿ ಅಧ್ಯಾಪಕರುಗಳು ಓಡಿ ಬಂದಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆ.





















































 
 

ಕಳೆದ 20 ವರ್ಷಗಳಿಂದ ಅವರು ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

error: Content is protected !!
Scroll to Top