ಜ.16 – ವಿಟ್ಲ ಜಾತ್ರಾ ಪ್ರಯುಕ್ತ ಸಮರ್ಪಣ್ ಕಲೋತ್ಸವ 2026: ಆಮಂತ್ರಣ ಪತ್ರಿಕೆ ಬಿಡುಗಡೆ

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯ ಸಲುವಾಗಿ ಜ. 16 ರಂದು ಸಮರ್ಪಣ್ ವಿಟ್ಲ ಇವರಿಂದ ‘ಸಮರ್ಪಣ್ ಕಲೋತ್ಸವ 2026’ ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಗೌರವ ಸಮರ್ಪಣೆ, ವಿದ್ಯಾನಿಧಿ ‌ಸಮರ್ಪಣೆ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ವಿಟ್ಲದ ಹಿರಿಯ ಸ್ವಯಂಸೇವಕ ಈಶ್ವರ ಡಿ. ಕೂಜಪ್ಪಾಡಿ ಅವರು ಬಿಡುಗಡೆ ಮಾಡಿದರು.

ಸಮರ್ಪಣ್ ಕಲೋತ್ಸವದಲ್ಲಿ ಚೈತನ್ಯ ಕಲಾವಿದರು ಬೈಲೂರು ಅವರಿಂದ ರಾಘು ಮಾಸ್ಟ್ರು ಎಂಬ ತುಳು ಹಾಸ್ಯಮಯ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಆಮಂತ್ರಣ ಬಿಡುಗಡೆ ಕಾರ್ಯಕ್ರಮದಲ್ಲಿ ಸಮರ್ಪಣ್ ವಿಟ್ಲದ ಅಧ್ಯಕ್ಷ ಯಶವಂತ ಎನ್., ಗೌರವಾಧ್ಯಕ್ಷ ಕೃಷ್ಣಯ್ಯ ಕೆ. ವಿಟ್ಲ ಅರಮನೆ, ಉಪಾಧ್ಯಕ್ಷ ಯಾದವ ಮಡಿವಾಳಕೋಡಿ, ಸೂರಜ್ ಕೋಟ್ಯಾನ್, ರವಿವರ್ಮ ವಿಟ್ಲ ಅರಮನೆ, ಕಾರ್ಯದರ್ಶಿ ರೋಹಿತ್ ಕಟ್ಟೆ, ಕೋಶಾಧಿಕಾರಿ ನಿಖಿಲ್ ಸಾಲ್ಯಾನ್, ಗೌರವ ಸಲಹೆಗಾರ ಮೋನಪ್ಪ ಗೌಡ ಶಿವಾಜಿ ನಗರ, ವಿಶ್ವನಾಥ ನಾಯ್ತೋಟ್ಟು, ಸಂಘಟನಾ ಕಾರ್ಯದರ್ಶಿ ರವಿಶಂಕರ್,
ಸಂಚಾಲಕ ಹರೀಶ್ ಕೆ ವಿಟ್ಲ, ಸದಸ್ಯರುಗಳಾದ , ಪವನ್ ಕಟ್ಟೆ, ಮನೋಜ್ ವಿಟ್ಲ, ಅಭಿ ಶಿವಾಜಿ ನಗರ, ಕೀರ್ತನ್ ಸಣ್ಣಗುತ್ತು, ಪ್ರವೀಣ್ ಸಣ್ಣಗುತ್ತು, ಅನಿಲ್, ದೀಕ್ಷಿತ್, ಗಣೇಶ್, ಕೌಶಿಕ್, ಲಿಖಿತ್, ವಿಟ್ಲ ಪಟ್ಟಣ ಪಂಚಾಯತ್‌ನ ಸ್ಥಾಯಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ರವಿಪ್ರಕಾಶ್, ಪ್ರಸಾದ್ ವಿಟ್ಲ ಅರಮನೆ, ಮೋಹನ್ ಕಟ್ಟಿ , ಕೃಷ್ಣಪ್ಪ ಪಳೇರಿ, ಬೇಬಿ ನೆಕ್ಕರೆ ಕಾಡು ಉಪಸ್ಥಿತರಿದ್ದರು.





















































 
 

error: Content is protected !!
Scroll to Top