ಜ್ಯೂಸ್ ಸೆಂಟರ್ ಸಿಬ್ಬಂದಿ ಮೇಲೆ ಹಲ್ಲೆ, ಬೆದರಿಕೆ: ನ್ಯಾಯಾಲಯದ ಆದೇಶದನ್ವಯ ಆರೋಪಿಗಳ ಮೇಲೆ ದೂರು ದಾಖಲು

ಉಪ್ಪಿನಂಗಡಿ: ಕೆಲ ಸಮಯದ ಹಿಂದೆ ನಗರದ ಜ್ಯೂಸ್ ಸೆಂಟರ್ ಒಂದಕ್ಕೆ ನುಗ್ಗಿ ಅಲ್ಲಿನ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಐವರು ಆರೋಪಿಗಳ ಮೇಲೆ ನ್ಯಾಯಾಲಯದ ಆದೇಶದ ಅನ್ವಯ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

ಆರೋಪಿಗಳನ್ನು ಯಾಹ್ಯಾ, ಸಿರಾಜ್, ಖಾದರ್, ತಾಹಿರಾ, ತಸ್ಮಿಯಾ ಎಂದು ಗುರುತಿಸಲಾಗಿದೆ.

ದೂರುದಾರ ಪೆರಿಯಡ್ಕದ ನೌಫ್ ಅವರು ನೀಡಿರುವ ದೂರಿನಲ್ಲಿ, ತಾವು ಉಪ್ಪಿನಂಗಡಿಯ ಜ್ಯೂಸ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಗೆ ಆಗಮಿಸಿದ ತಾಹಿರ ಮತ್ತು ತಸ್ಮಿಯಾ ಪೆರಿಯಡ್ಕದಲ್ಲಿ ನಡೆದಿದೆ ಎನ್ನಲಾದ ಘಟನೆಯೊಂದಕ್ಕೆ ಸಂಬಂಧಿಸಿ ಕೈಯಿಂದ ಹೊಡೆದು, ಜೀವ ಬೆದರಿಕೆ ಹಾಕಿದ್ದಾರೆ. ಜ್ಯೂಸ್ ಸೆಂಟರ್ ಹೊರಗಡೆ ನಿಂತಿದ್ದ ಯಾಹ್ಯಾ, ಸಿರಾಜ್, ಖಾದರ್ ಅವರು ಜೀವ ಬೆದರಿಕೆ ಹಾಕಿದ್ದಾರೆ.





















































 
 

ಈ ಬಗ್ಗೆ ದೂರು ಪೊಲೀಸ್ ಇಲಾಖೆಯಲ್ಲಿ ದಾಖಲಾಗದೇ ಇದ್ದು, ದೂರುದಾರರು ‌ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಈಗ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

error: Content is protected !!
Scroll to Top