ಆಂಧ್ರಪ್ರದೇಶ: ರಾಜ್ಯದ ಕೊನಸಿಮಾ ಜಿಲ್ಲೆಯ ಮಾಲಿಕಿಪುರಂ ಮಂಡಲದ ಇರುಸುಮುಂಡ ಗ್ರಾಮದಲ್ಲಿ ಒಎನ್‌ಜಿಸಿ ಪೈಪ್‌ಲೈನ್ ಸ್ಪೋಟವಾದ ಪರಿಣಾಮ ಭಾರೀ ಪ್ರಮಾಣದಲ್ಲಿ ಅನಿಲ ಸೋರಿಕೆಯಾಗಿದೆ.
ಈ ಹಿನ್ನೆಲೆ ಹತ್ತಿರದ ಮೂರು ಗ್ರಾಮಗಳ ಜನರನ್ನು ಸ್ಥಳಾಂತರ ಮಾಡಲಾಗಿದೆ. ಹಾಗೆಯೇ ವಿದ್ಯುತ್ ಉಪಕರಣಗಳು, ಸ್ಟೌ, ಗ್ಯಾಸ್ ಸೇರಿದಂತೆ ಯಾವುದೇ ಬೆಂಕಿ ಹೊತ್ತುವ ಸಲಕರಣೆಗಳನ್ನು ಬಳಕೆ ಮಾಡದಂತೆ ಸೂಚಿಸಲಾಗಿದೆ.
ಸ್ಥಳದಲ್ಲಿ ಪರಿಸ್ಥಿತಿ ನಿಭಾಯಿಸಲು ONGC ತಂಡವನ್ನು ನಿಯೋಜಿಸಲಾಗಿದೆ. ONGC ಬಾವಿ ಮರು ಕೊರೆಯುವ ಕೆಲಸ ನಡೆಯುವ ಸಮಯದಲ್ಲಿ ಈ ದುರಂತ ಸಂಭವಿಸಿದೆ.
























