ಹರಿದ್ವಾರಕ್ಕೆ ಹಿಂದೂಯೇತರರ ನಿಷೇಧ: ಉತ್ತರಾಖಂಡ್ ಸಿಎಂ ಹೇಳಿದ್ದೇನು?

ಡೆಹ್ರಾಡೂನ್: ಹರಿದ್ವಾರ ಮತ್ತು ಇನ್ನಿತರ ಹಿಂದೂಗಳ ಧಾರ್ಮಿಕ ಯಾತ್ರಾ ಸ್ಥಳಗಳಿಗೆ ಹಿಂದೂಯೇತರರ ಪ್ರವೇಶ‌ ನಿರ್ಬಂಧಿಸುವ ಕುರಿತು ಉತ್ತರಾಖಂಡ್ ಸರ್ಕಾರ ಚಿಂತನೆ ನಡೆಸಿದೆ.

ಈ ಬಗ್ಗೆ ಅಲ್ಲಿನ ಸಿಎಂ ಪುಷ್ಕರ್ ಸಿಂಗ್ ಧಾಮಿ ಮಾತನಾಡಿದ್ದು, ಪವಿತ್ರ ನಗರ ಹರಿದ್ವಾರ. ಆ ದೇವ ಭೂಮಿಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಸ್ವರೂಪವನ್ನು ಕಾಪಾಡಲು ಸರ್ಕಾರ ಬದ್ಧ.‌ ಅಲ್ಲಿನ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಹಿಂದೂಯೇತರರಿಗೆ ಪ್ರವೇಶ ನಿರ್ಬಂಧಕ್ಕೆ ಚಿಂತನೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಹರಿದ್ವಾರದಲ್ಲಿ 2027 ರಲ್ಲಿ ಅರ್ಧ ಕುಂಭ ಮೇಳ ನಡೆಯಲಿದೆ‌. ಅದಕ್ಕೂ ಮುನ್ನ ಇಲ್ಲಿಂದ ಹಿಂದೂಯೇತರರು ನೆಲೆಸುವುದನ್ನು ನಿಷೇಧ ಮಾಡಬೇಕು. ಮಾಂಸಾಹಾರ ಮತ್ತು ಇನ್ನೂ ಕೆಲವಾರು ವಹಿವಾಟುಗಳನ್ನು ನಿಷೇಧಿಸಬೇಕು. ಹರಿದ್ವಾರದ ಗಂಗಾ ಘಾಟ್ ಸುರಕ್ಷತೆ ಕಾಪಾಡುವಂತೆಯೂ ಶ್ರೀ ಗಂಗಾ ಸಭಾ ಒತ್ತಾಯಿಸಿತ್ತು. ಇದಕ್ಕೂ ಸಕಾರಾತ್ಮಕ ಪ್ರತಿಕ್ರಿಯೆ ಸರ್ಕಾರದಿಂದ ಬಂದಿದೆ.





















































 
 

ಹರಿದ್ವಾರದ ‘ಹರ್ ಕಿ ಪೌಡಿ’ ಸೇರಿದಂತೆ ಕೆಲವು ಆಯ್ದ ಗಂಗಾ ನದಿಯ ತಟಗಳಿಗೆ ಹಿಂದುಯೇತರರಿಗೆ ಅಲ್ಲಿನ ನಗರಸಭೆ ನಿಷೇಧ ವಿಧಿಸಿದೆ. ಈಗ ಈ ನಿರ್ಬಂಧವನ್ನು ಹರಿದ್ವಾರದಿಂದ ಋಷಿಕೇಶದ ವರೆಗಿನ ಎಲ್ಲಾ 105 ಗಂಗಾ ಘಾಟ್ ಗಳಿಗೆ ವಿಸ್ತರಿಸಬೇಕೆಂದು ಸಾಧು, ಸಂತರು ಮತ್ತು ‘ಶ್ರೀ ಗಂಗಾ ಸಭಾ’ ಆಗ್ರಹಿಸಿರುವುದಾಗಿದೆ.

ಭಾರತದ ಅತಿ ಮುಖ್ಯ ಯಾತ್ರಾಸ್ಥಳ ಹರಿದ್ವಾರವಾಗಿದ್ದು ವಾರ್ಷಿಕವಾಗಿ ನಾಲ್ಕು ಕೋಟಿ ಭಕ್ತರು ಭೇಟಿ ನೀಡುತ್ತಿದ್ದಾರೆ. ಈ ನಡುವೆ, ಹೊರಗಿನ ವ್ಯಕ್ತಿಗಳು ಬಂದು ನೆಲೆಸುತ್ತಿರುವುದು, ಪ್ರವಾಸಿ ತಾಣಗಳ ರೀತಿ ರೆಸಾರ್ಟ್ ನಿರ್ಮಿಸುತ್ತಿರುವುದು, ಆಮೂಲಕ ಧಾರ್ಮಿಕ ಪ್ರವಾಸೋದ್ಯಮ ಬದಲು ವಿಹಾರಿ ತಾಣದ ರೀತಿ ಬದಲಾಯಿಸುತ್ತಿರುವ ಬೆಳವಣಿಗೆಗಳು ನಡೆಯುತ್ತಿವೆ. ಇದಕ್ಕಾಗಿ ಮಾಂಸಾಹಾರ ಪೂರ್ತಿ ನಿಷೇಧ ಮತ್ತು ಹಿಂದುಯೇತರ ವ್ಯಕ್ತಿಗಳು ಪವಿತ್ರ ಸ್ಥಳದಲ್ಲಿ ನೆಲೆಸುವಂತಾಗಬಾರದು ಎಂಬ ನಿಟ್ಟಿನಲ್ಲಿ ಹಿಂದು ಪರ ಸಂಘಟನೆಗಳು ರಾಜ್ಯ ಬಿಜೆಪಿ ಸರ್ಕಾರಕ್ಕೆ ಒತ್ತಡ ಹೇರಿವೆ ಎಂದು ತಿಳಿದು ಬಂದಿದೆ.

error: Content is protected !!
Scroll to Top