ರೈಲಿನಲ್ಲಿ ಭೀಕರ ಅಗ್ನಿ ಅವಘಡ : ಓರ್ವ ಪ್ರಯಾಣಿಕ ಸಾವು

ಟಾಟಾನಗರ-ಎರ್ನಾಕುಲಂ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಅವಘಡ

ವಿಶಾಖಪಟ್ಟಣಂ : ವಿಶಾಖಪಟ್ಟಣಂನಿಂದ 66 ಕಿ.ಮೀ ದೂರದಲ್ಲಿರುವ ಅನಕಪಳ್ಳಿ ಜಿಲ್ಲೆಯ ಯಲಮಂಚಿಲಿಯಲ್ಲಿ ಟಾಟಾನಗರ-ಎರ್ನಾಕುಲಂ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳಿಗೆ ಬೆಂಕಿ ಹತ್ತಿಕೊಂಡ ಪರಿಣಾಮ ಒಬ್ಬ ಪ್ರಯಾಣಿಕ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಗ್ನಿ ಅವಘಡ ಮಧ್ಯರಾತ್ರಿ 12.45ಕ್ಕೆ ನಡೆದಿದೆ. ರೈಲು ಬೆಂಕಿ ಹೊತ್ತಿಕೊಂಡಾಗ ಒಂದು ಬೋಗಿಯಲ್ಲಿ 82 ಪ್ರಯಾಣಿಕರು ಮತ್ತು ಇನ್ನೊಂದು ಬೋಗಿಯಲ್ಲಿ 76 ಪ್ರಯಾಣಿಕರು ಇದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.





















































 
 

ಮೃತರನ್ನು ಚಂದ್ರಶೇಖರ್ ಸುಂದರಂ ಎಂದು ಗುರುತಿಸಲಾಗಿದೆ. ಹಾನಿಗೊಳಗಾದ ಎರಡು ಬೋಗಿಗಳನ್ನು ರೈಲಿನಿಂದ ಬೇರ್ಪಡಿಸಲಾಗಿದ್ದು, ಅದು ಎರ್ನಾಕುಲಂ ಕಡೆಗೆ ಸಾಗುತ್ತಿದೆ. ಹಾನಿಗೊಳಗಾದ ಬೋಗಿಗಳಲ್ಲಿರುವ ಪ್ರಯಾಣಿಕರನ್ನು ಅವರ ಸ್ಥಳಗಳಿಗೆ ಕಳುಹಿಸಲಾಗುತ್ತದೆ. ಬೆಂಕಿಯ ಕಾರಣವನ್ನು ಕಂಡುಹಿಡಿಯಲು ಎರಡು ವಿಧಿವಿಜ್ಞಾನ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬಿ1 ಬೋಗಿಯಲ್ಲಿ ಹತ್ತಿಕೊಂಡ ಬೆಂಕಿ ಕ್ಷಿಪ್ರವಾಗಿ ಪಕ್ಕದ ಬೋಗಿಗಳಿಗೆ ಹರಡಿದೆ. ಬೆಂಇಯಿಂದಾಗಿ ಮೂರು ಬೀಗಿಗಳಿಗೆ ಹಾನಿ ಸಂಭವಿಸಿದೆ. ಬಿ1 ಬೋಗಿಯಲ್ಲಿ ಪುರುಷನ ಮೃತದೇಹ ಸಿಕ್ಕಿದೆ. ಉಳೀದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!
Scroll to Top