ಎಚ್ಚರ…ಹೊಸ ವರ್ಷದ ಸಂದೇಶದಲ್ಲೂ ಇರಬಹುದು ಮೋಸದ ಜಾಲ!

ಅಪರಿಚಿತ ನಂಬರ್‌ಗಳಿಂದ ಬಂದ ಲಿಂಕ್‌ಗಳನ್ನು ಓಪನ್‌ ಮಾಡಬೇಡಿ

ಬೆಂಗಳೂರು : ಹಬ್ಬಗಳು, ಹೊಸ ವರ್ಷದಂತಹ ವಿಶೇಷ ಸಂದರ್ಭಗಳನ್ನು ಗುರಿಯಾಗಿಸಿಕೊಂಡು ಸೈಬರ್ ವಂಚಕರು ನಕಲಿ ಜಾಲವನ್ನು ಹರಡುತ್ತಿದ್ದಾರೆ. ಆಫರ್‌ಗಳು, ಗಿಫ್ಟ್‌ಗಳು, ಕ್ಯಾಶ್‌ಬ್ಯಾಕ್ ಎನ್ನುವ ಆಕರ್ಷಕ ಸಂದೇಶಗಳನ್ನು ವಾಟ್ಸ್‌ಅಪ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಕಳುಹಿಸಲಾಗುತ್ತಿದೆ. ಇಂತಹ ಸಂದೇಶಗಳಲ್ಲಿರುವ ಲಿಂಕ್‌ಗಳನ್ನು ತಿಳಿಯದೆ ಕ್ಲಿಕ್ ಮಾಡಿದರೂ ಬ್ಯಾಂಕ್ ಖಾತೆ ಲೂಟಿ ಆಗುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಜನರು ಮೋಸದ ಜಾಲಕ್ಕೆ ಬಲಿಯಾಗದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅಪರಿಚಿತ ಲಿಂಕ್‌ಗಳು, ಅನುಮಾನಾಸ್ಪದ ಆಫರ್ ಸಂದೇಶಗಳನ್ನು ಓಪನ್‌ ಮಾಡಬಾರದು ಎಂದು ಸಲಹೆ ನೀಡಿದ್ದಾರೆ. ವಿಶೇಷವಾಗಿ ಹೊಸ ವರ್ಷದ ಶುಭಾಶಯಗಳನ್ನು ಕಳುಹಿಸುವಾಗ ಸಾಮಾಜಿಕ ಜಾಲತಾಣದ ಲಿಂಕ್‌ಗಳ ಬದಲು ಸಾಮಾನ್ಯ ಟೆಕ್ಸ್ಟ್ ಮೆಸೇಜ್ ಮೂಲಕ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಹೆಚ್ಚು ಸುರಕ್ಷಿತ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೇ ಜಾಗೃತಿ ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ.





















































 
 

ಇತ್ತೀಚೆಗಿನ ದಿನಗಳಲ್ಲಿ ಏನೇನೋ ಲಿಂಕ್‌ಗಳನ್ನು ಕಳುಹಿಸಿ ಬ್ಯಾಂಕ್‌ ಖಾತೆಯಿಂದ ಹಣ ಎಗರಿಸುವ ಪ್ರಕರಣಗಳು ಆಗಾಗ ಸಂಭವಿಸುತ್ತಿರುತ್ತದೆ. ಹಬ್ಬಗಳಂಥ ಸಂದರ್ಭಗಳಲ್ಲಿ ಈ ಸೈಬರ್‌ ವಂಚಕರು ಹೆಚ್ಚು ಸಕ್ರಿಯರಾಗಿರುತ್ತಾರೆ. ಹೀಗಾಗಿ ಅಪರಿಚಿತ ನಂಬರ್‌, ಅಕೌಂಟ್‌ಗಳಿಂದ ಬಂದ ಲಿಂಕ್‌ಗಳನ್ನು ಓಪನ್‌ ಮಾಡದಿರುವುದೇ ಸುರಕ್ಷಿತ ಎಂದು ಪೊಲೀಸರು ಸಲಹೆ ನೀಡಿದ್ದಾರೆ.

error: Content is protected !!
Scroll to Top