ಧರ್ಮಸ್ಥಳ ಪ್ರಕರಣ : ವರದಿ ಮೇಲಿನ ತೀರ್ಪು ಮತ್ತೆ ಮುಂದೂಡಿಕೆ

ವರದಿಯ ಕೆಲವು ಭಾಗಗಳನ್ನು ಜಯಂತ್‌ಗೆ ನೀಡಿದ ನ್ಯಾಯಾಲಯ

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣ ಬಗ್ಗೆ ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ಕೋರ್ಟ್‌ಗೆ ಸಲ್ಲಿಸಿದ್ದ ವರದಿಯ ಬಗ್ಗೆ ಡಿ.26ಕ್ಕೆ ನಿಗದಿಪಡಿಸಲಾಗಿದ್ದ ಆದೇಶವನ್ನು ಡಿ.29ಕ್ಕೆ ಬೆಳ್ತಂಗಡಿ ನ್ಯಾಯಾಲಯ ಮುಂದೂಡಿದೆ

ಬೆಳ್ತಂಗಡಿ ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯಕ್ಕೆ ನ.20ರಂದು ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ, ವಿಠಲ್ ಗೌಡ, ಸುಜಾತ ಭಟ್ ವಿರುದ್ಧ ಸುಳ್ಳು ಸಾಕ್ಷಿ ವರದಿಯನ್ನು ಸೆಕ್ಷನ್‌ 215ರ ಅಡಿಯಲ್ಲಿ ಸಲ್ಲಿಸಿದ್ದರು.





















































 
 

ಈ ವರದಿಯ ಬಗ್ಗೆ ಬೆಳ್ತಂಗಡಿ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯೇಂದ್ರ ಎಚ್.ಟಿ ಅವರು ವಿಚಾರಣೆ ನಡೆಸಿ ತೀರ್ಪನ್ನು ಡಿ.26ಕ್ಕೆ ನಿಗದಿಪಡಿಸಿದ್ದರು. ಇಂದು ನ್ಯಾಯಾಲಯ ತೀರ್ಪನ್ನು ಮತ್ತೆ ಮುಂದಿನ ಡಿ.29ಕ್ಕೆ ಮುಂದೂಡಿದೆ. ಬೆಳ್ತಂಗಡಿ ನ್ಯಾಯಾಲಯಕ್ಕೆ ಎಸ್ಐಟಿ ಎಸ್ಪಿ ಸಿ.ಎ.ಸೈಮನ್, ಡಿವೈಎಸ್ಪಿ ಲೋಕೇಶ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

ಇನ್ನೊಂದು ಬೆಳವಣಿಗೆಯಲ್ಲಿ ಎಸ್.ಐ.ಟಿ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯನ್ನುಹೋರಾಟಗಾರ ಜಯಂತ್ ಟಿಗೆ ನೀಡಲಾಗಿದೆ. ಎಸ್.ಐ.ಟಿ 3923 ಪುಟಗಳ ವರದಿಯನ್ನು ಸಲ್ಲಿಸಿದ್ದು ಇದರಲ್ಲಿ 1,100 ಪುಟಗಳನ್ನು ನ್ಯಾಯಾಲಯ ಜಯಂತ್‌ಗೆ ನೀಡಿರುವುದಾಗಿ ತಿಳಿದು ಬಂದಿದೆ.
ಎಸ್.ಐ.ಟಿ ಸಲ್ಲಿಸಿರುವ ವರದಿಯನ್ನು ಬಹಿರಂಗಗೊಳಿಸದಂತೆ ನ್ಯಾಯಾಲಯದಲ್ಲಿ ಕೇಳಿಕೊಂಡಿತ್ತು. ಈ ವರದಿಯನ್ನು ಪಡೆಯಲು ಜಯಂತ್ ಟಿ. ಬೆಳ್ತಂಗಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು ಆದರೆ ಎಸ್.ಐ.ಟಿ ಕೋರಿಕೆಯ ಮೇಲೆ ನ್ಯಾಯಾಲಯ ಅದನ್ನು ನೀಡಲು ನಿರಾಕರಿಸಿತ್ತು. ಆದರೆ ಬಳಿಕ ಬೆಂಗಳೂರಿನ ಹಿರಿಯ ನ್ಯಾಯವಾದಿ ದೊರೆರಾಜು ಅವರು ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿ ಜಯಂತ್ ಪರವಾಗಿ ವಾದ ಮಂಡಿಸಿದ್ದರು. ಅಂತಿಮವಾಗಿ ನ್ಯಾಯಾಲಯ ಎಸ್.ಐ.ಟಿ ವರದಿಯನ್ನು ನೀಡಲು ಸಮ್ಮತಿ ಸೂಚಿಸಿತ್ತು. ಶುಕ್ರವಾರ ನ್ಯಾಯಾಲಯ ಜಯಂತ್‌ಗೆ ಎಸ್.ಐ.ಟಿ ವರದಿಯ ನ್ನು ನೀಡಿದೆ. ವರದಿಯಲ್ಲಿ ಏನಿದೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೆ ಹೊರಬರಬೇಕಾಗಿದೆ.

error: Content is protected !!
Scroll to Top