ಅಟಲ್‌ಜಿ ನೆನಪಿನಲ್ಲಿ ನವದೆಹಲಿಯಲ್ಲಿ 100 ಕ್ಯಾಂಟೀನ್‌ಗಳನ್ನು ಆರಂಭಿಸಿದ ರೇಖಾ ಗುಪ್ತಾ ಸರ್ಕಾರ

ನವದೆಹಲಿ: ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಜಯಂತಿಯ ಹಿನ್ನೆಲೆ ನವದೆಹಲಿ ಸರ್ಕಾರ ರಾಜ್ಯದೆಲ್ಲೆಡೆ 100 ಅಟಲ್ ಕ್ಯಾಂಟೀನ್‌ಗಳನ್ನು ಆರಂಭ ಮಾಡಿದ್ದು, ಈ ಕ್ಯಾಂಟೀನ್‌ಗಳಲ್ಲಿ ಸಾರ್ವಜನಿಕರಿಗೆ 5 ರೂ. ಗೆ ಊಟ ಸಿಗಲಿದೆ.

ನೂರು ಕ್ಯಾಂಟೀನ್‌ಗಳ ಪೈಕಿ ಮೊದಲ ಕ್ಯಾಂಟೀನ್ ಅನ್ನು ನವದೆಹಲಿ ಸಿ ಎಂ ರೇಖಾ ಗುಪ್ತಾ ಅವರು ಲಾಜಪತ್ ನಗರದ ನೆಹರೂ ನಗರದಲ್ಲಿ ಉದ್ಘಾಟಿಸಿದ್ದಾರೆ.

ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಈ ಕ್ಯಾಂಟೀನ್‌ಗಳನ್ನು ಆರಂಭ ಮಾಡಲಾಗಿದ್ದು, ಪ್ರತಿ ಕ್ಯಾಂಟೀನಿನಲ್ಲಿ ದಿನಕ್ಕೆ ಸುಮಾರು ಐನೂರು ಜನರಿಗೆ ಮಧ್ಯಾಹ್ನ ಮತ್ತು ರಾತ್ರಿಯ ಉಪಹಾರ ದೊರೆಯಲಿದೆ. ಒಟ್ಟಾರೆಯಾಗಿ ನೂರು ಕ್ಯಾಂಟೀನ್‌ಗಳ ದಿನಕ್ಕೆ ಮೂಲಕ ಸುಮಾರು ಒಂದು ಲಕ್ಷ ಜನರಿಗೆ ಆಹಾರ ನೀಡುವ ವ್ಯವಸ್ಥೆಯನ್ನು ಕಡಿಮೆ ದರಕ್ಕೆ ಕಲ್ಪಿಸಲಾಗಿದೆ.





















































 
 

ನವದೆಹಲಿಯ ಅರ್ಬನ್ ಶೆಲ್ಟರ್ ಇಂಪ್ರೂವ್‌ಮೆಂಟ್ ಬೋರ್ಡ್ ಈ ಕ್ಯಾಂಟೀನ್‌ಗಳ ನಿರ್ವಹಣೆಯ ಹೊಣೆಯನ್ನು ಹೊತ್ತಿರುವುದಾಗಿದೆ.

error: Content is protected !!
Scroll to Top