ಉಚಿತ ಡ್ರೋನ್ ಹಾರಾಟ ತರಬೇತಿ ಉದ್ಘಾಟನೆ

ಪುತ್ತೂರು: ಇಲ್ಲಿನ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ಮಹಿಳೆಯರಿಗಾಗಿ ಡ್ರೋನ್ ಹಾರಿಸುವ ಉಚಿತ ತರಬೇತಿ ಆರಂಭಗೊಂಡಿತು. ಪುತ್ತೂರಿನ ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್, ಎವಿಜಿ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಅರಸ್ ಟ್ರಸ್ಟ್’ಗಳ ಕೂಡುವಿಕೆಯಲ್ಲಿ ತರಬೇತಿ
ರೂಪುಗೊಂಡಿತ್ತು.

ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ರೆ. ಫಾ. ಡಾಕ್ಟರ್ ಅಂತೋನಿ ಪ್ರಕಾಶ್ ಮೊಂತೆರೊ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿ ವೇಗವಾಗಿ ಬದಲಾಗುತ್ತಿರುವ ಸಮಾಜದಲ್ಲಿ ಉಳಿಯಬೇಕಾದರೆ ವೇಗವಾಗಿ ಕಾರ್ಯಾಚರಣೆ ಮಾಡಬೇಕಿದೆ. ಇದಕ್ಕೆ ಡ್ರೋನ್ ಹಾರಿಸುವ ವಿದ್ಯೆ ಪೂರಕವಾಗಿದೆ ಎಂದರು. ಇಂತಹ ತರಬೇತಿಯನ್ನು ಪಡೆದ ಮಹಿಳೆಯರು ನಮ್ಮ ದೇಶದ ಗೌರವದ ಪ್ರತೀಕವಾಗುವ ಹಾಗೆ ಗಟ್ಟಿಯಾಗಿ ಬೆಳೆಯಬೇಕಿದೆ ಎಂದು ಕರೆಯಿತ್ತರು.

ಕಾರ್ಯಕ್ರಮದ ಅತಿಥಿಯಾಗಿದ್ದ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನ ಅಧ್ಯಕ್ಷರಾದ ಕಳುವಾಜೆ ವೆಂಕಟ್ರಮಣ ಗೌಡರು ಮಾತನಾಡಿ ದೇಶದ ಭರವಸೆಯ ಆಸ್ತಿಗಳೆಂದರೆ ಮಹಿಳೆಯರು. ಅವರು ಸಶಕ್ತರಾದಾಗ ಸಮಾಜದ ಉನ್ನತಿ ಖಾತ್ರಿಯಾಗುತ್ತದೆ ಎಂದು ಹೇಳಿದರು.





















































 
 

ಮುಖ್ಯ ತರಬೇತುದಾರರಾದ ಹೈದರಾಬಾದ್’ನ ತಾರಾ ಯುಎವಿ ಪ್ರೈವೇಟ್ ಲಿಮಿಟೆಡ್ ಇದರ ಅಕೌಂಟೇಬಲ್ ಮ್ಯಾನೇಜರ್ ಆಗಿರುವ ಡಾಕ್ಟರ್ ವಿಜಯ್ ಕುಮಾರ್ ಮಾತನಾಡಿ ಇಂದು ಮಹಿಳೆ – ಪುರುಷ ಎಂಬ ಬೇಧವಿಲ್ಲದೆ ಎಲ್ಲರೂ ಸಮಾನ ಶಕ್ತಿಶಾಲಿಗಳು ಆಗಿದ್ದಾರೆ ಎಂದು ಹೇಳಿ ಭಾಗವಹಿಸಿದ ತರಬೇತಾರ್ಥಿಗಳಿಗೆ ಶುಭಕೋರಿದರು.

ಸಭಾಧ್ಯಕ್ಷರಾಗಿದ್ದ ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ಇದರ ಅಧ್ಯಕ್ಷ ಡಿ.ವಿ. ಮನೋಹರ್ ಮಾತನಾಡಿ ಇಂದಿನ ದಿನಮಾನಕ್ಕೆ ಅಗತ್ಯವಾಗಿರುವ ಡ್ರೋನ್ ಹಾರಾಟ ವಿದ್ಯೆ ಅಮೂಲ್ಯವಾದುದು ಎಂದು ಅಭಿಪ್ರಾಯಪಟ್ಟರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಥಮ

ಮಹಿಳೆಯರಿಗಾಗಿ ನಡೆಯುತ್ತಿರುವ ಈ ಉಚಿತ ಡ್ರೋನ್ ಹಾರಾಟ ತರಬೇತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಥಮವಾಗಿದೆ.

ಹೈದರಾಬಾದ್’ನ ತಾರಾ ಯುಎವಿ ಪ್ರೈವೇಟ್ ಲಿಮಿಟೆಡ್’ನ ತರಬೇತಿ ಮತ್ತು ದೆಹಲಿಯ ಡಿ.ಎಂ.ಐ. ಹೌಸಿಂಗ್ ಅಂಡ್ ಫೈನಾನ್ಸ್ ಲಿಮಿಟೆಡ್ ಪ್ರಾಯೋಜಕತ್ವ

ಹೈದರಾಬಾದ್’ನ ತಾರಾ ಯುಎವಿ ಪ್ರೈವೇಟ್ ಲಿಮಿಟೆಡ್ ನೀಡುವ ತರಬೇತಿಯನ್ನು ದೆಹಲಿಯ ಡಿ.ಎಂ.ಐ. ಹೌಸಿಂಗ್ ಅಂಡ್ ಫೈನಾನ್ಸ್ ಲಿಮಿಟೆಡ್ ಪ್ರಾಯೋಜಿಸುತ್ತಿದೆ.

ಡಿಜಿಸಿಎಯಿಂದ ಪ್ರಮಾಣಪತ್ರ

ಕೇಂದ್ರ ಸರ್ಕಾರದ Director General of Civil Aviation (DGCA) ಅರ್ಥಾತ್ ಭಾರತೀಯ ನಾಗರಿಕ ವಿಮಾನಯಾನ ಸಂಸ್ಥೆಯ ಮಹಾನಿರ್ದೇಶಕರಿಂದ ನೀಡಲ್ಪಡುವ ಪ್ರಮಾಣಪತ್ರ ಅತ್ಯಂತ ಮೌಲ್ಯ ಉಳ್ಳದ್ದಾಗಿದೆ.

80% ತನಕ ಸಹಾಯಧನ

ಡಿಜಿಸಿಎಯಿಂದ ಪ್ರಮಾಣಪತ್ರದ ಆಧಾರದಲ್ಲಿ ಡ್ರೋನ್ ಕೊಳ್ಳುವವರಿಗೆ 80% ತನಕವೂ ಸಹಾಯಧನ ದೊರೆಯುತ್ತದೆ.

ಕಾರ್ಯಕ್ರಮದ ಸಂಯೋಜಕರಾದ ಅರಸ್ ಟ್ರಸ್ಟ್ ಪುತ್ತೂರು ಇದರ ಅಧ್ಯಕ್ಷ ಸೀತಾರಾಮ ಕೇವಳ ನಿರೂಪಿಸಿದ ಕಾರ್ಯಕ್ರಮದಲ್ಲಿ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನ ಶಿಕ್ಷಕಿ ಶ್ವೇತಾ ಪ್ರಾರ್ಥನೆ, ಸಂಚಾಲಕ ಎ.ವಿ. ನಾರಾಯಣ ಸ್ವಾಗತ ಮತ್ತು ಉಪಾಧ್ಯಕ್ಷ ಉಮೇಶ್ ಮಳುವೇಲು ವಂದನಾರ್ಪಣೆಗಳನ್ನು ನೆರವೇರಿಸಿದರು. ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನ ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ ಮತ್ತು ಪ್ರಾಂಶುಪಾಲ ಅಮರನಾಥ್ ಪಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ಇದರ ಕಚೇರಿ ಪ್ರಬಂಧಕ ಸುನೀಲ್, ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನ ನಿರ್ದೇಶಕಿ ಶ್ರೀಮತಿ ಪ್ರತಿಭಾದೇವಿ ನಾರಾಯಣ ಮತ್ತು ಅರಸ್ ಟ್ರಸ್ಟ್’ನ ಕಾರ್ಯದರ್ಶಿ ಡಾಕ್ಟರ್ ಹರಿಣಾಕ್ಷಿ ಎಂ.ಡಿ. ಅತಿಥಿಗಳನ್ನು ಗೌರವಿಸಿದರು.

ಒಟ್ಟು 12 ಮಹಿಳೆಯರು ತರಬೇತಿಯಲ್ಲಿ ಭಾಗವಹಿಸುತ್ತಿದ್ದು ಒಂದು ವಾರದ ತರಬೇತಿ ಇಲ್ಲಿ ನಡೆಯಲಿದ್ದು ಬಳಿಕ ಇನ್ನೊಂದು ವಾರದ ತರಬೇತಿ ಹೈದರಾಬಾದ್’ನಲ್ಲಿ ನಡೆಯಲಿದೆ.

error: Content is protected !!
Scroll to Top