‘ನನಗೆ ಅನುಭವ ಕಡಿಮೆ’ ಎಂದು ಡಿ.ಕೆ. ಶಿವಕುಮಾರ್ ತಿರುಗೇಟು ‌ನೀಡಿದ್ದು ಯಾರಿಗೆ ಗೊತ್ತಾ?

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರ ಕೋಲ್ಡ್ ವಾರ್ ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಸಿಎಂ ‌ಸಿದ್ದರಾಮಯ್ಯ ಆಪ್ತ, ಸಚಿವ ಕೆ. ಎನ್. ರಾಜಣ್ಣ ಅವರು ರಾಹುಲ್ ಗಾಂಧಿಗೆ ‌ಸಾಲು ಸಾಲು ಪತ್ರಗಳನ್ನು ಬರೆದಿದ್ದು, ಈ ಬೆಳವಣಿಗೆ ಡಿಸಿಎಂ ಡಿ. ಕೆ. ಶಿವಕುಮಾರ್ ಅವರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜಣ್ಣ ತಮ್ಮ ಪತ್ರದಲ್ಲಿ ಕೆ ಪಿ ಸಿ ಸಿ ಅಧ್ಯಕ್ಷರ ಆಯ್ಕೆ ಸರಿಯಾಗಿದ್ದಿದ್ದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತಷ್ಟು ಸ್ಥಾನಗಳನ್ನು ಗೆಲ್ಲುತ್ತಿತ್ತು ಎಂದು ಅವರು ಉಲ್ಲೇಖ ಮಾಡಿದ್ದರು. ಈ ವಿಚಾರ ಡಿಕೆಶಿ ನಾಯಕತ್ವವನ್ನು ಪ್ರಶ್ನೆ ಮಾಡಿದಂತಿತ್ತು.

ಇದಕ್ಕೆ ಡಿಕೆಶಿ ಅವರು ವ್ಯಂಗ್ಯಭರಿತವಾಗಿಯೇ ಉತ್ತರ ನೀಡಿದ್ದು, ನನಗೆ ಅನುಭವ ಕಡಿಮೆ. ರಾಜಣ್ಣ ಅವರಂತಹ ಹಿರಿಯರ ಮಾತಿನಂತೆ ನಾನು ಮತ್ತಷ್ಟು ತರಬೇತಿ ಪಡೆದು ಬರುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.





















































 
 

ಒಟ್ಟಿನಲ್ಲಿ ರಾಜಣ್ಣ ಅವರು ರಾಹುಲ್ ಗಾಂಧಿಗೆ ಬರೆದ ಪತ್ರ ಕಾಂಗ್ರೆಸ್ ಪಕ್ಷದೊಳಗೆ ಮತ್ತಷ್ಟು ಗೊಂದಲ ಸೃಷ್ಟಿ ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

error: Content is protected !!
Scroll to Top