ಟೊರೊಂಟೊ: ಕೆನಡಾದಲ್ಲಿ ಭಾರತೀಯ ಮಹಿಳೆಯೊಬ್ಬರ ಹತ್ಯೆಯಾಗಿದ್ದು, ಶಂಕಿತ ಆರೋಪಿಯ ಗುರುತು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಆರೋಪಿಯನ್ನು ಅಬ್ದುಲ್ ಗಫೂರ್ (32) ಎಂದು ಗುರುತಿಸಲಾಗಿದೆ. ಹತ್ಯೆಯಾದ ಮಹಿಳೆಯನ್ನು ಹಿಮಾಂಶಿ ಖುರಾನಾ (30) ಎಂದು ಗುರುತಿಸಲಾಗಿದೆ. ಆಕೆಯ ಪ್ರಿಯಕರನೇ ಈ ಹತ್ಯೆ ನಡೆಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಆರೋಪಿಯ ಪತ್ತೆಗಾಗಿ ಹುಡುಕಾಟ ಆರಂಭಿಸಲಾಗಿದೆ.
ಡಿ. 19 ರಂದು ಹಿಮಾಂಶಿ ನಾಪತ್ತೆ ಎಂಬುದಾಗಿ ಪೋಲೀಸ್ ಠಾಣೆಗೆ ಕರೆ ಬಂದಿದ್ದು, ಡಿ. 20 ರಂದು ಆಕೆಯ ಶವವನ್ನು ಅವರು ಕಾಣೆಯಾಗಿದ್ದಾರೆ ಎಂದು ವರದಿಯಾದ ಸ್ಥಳದಲ್ಲೇ ಪತ್ತೆ ಮಾಡಲಾಗಿತ್ತು. ಮೃತದೇಹ ಪತ್ತೆಯಾದ ಎರಡು ದಿನಗಳ ಬಳಿಕ ಶಂಕಿತನ ಕುರಿತ ಮಾಹಿತಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದರು. ಶಂಕಿತನ ಚಿತ್ರವನ್ನೂ ಪೊಲೀಸರು ಬಿಡುಗಡೆ ಮಾಡಿದ್ದು, ಆಕೆಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
























