ಮಲ್ಪೆ ಸಮುದ್ರದಲ್ಲಿ ಸಿಕ್ಕಿದ ದೇವರ ವಿಗ್ರಹ : ವಿಡಿಯೋ ವೈರಲ್‌

ಇಸ್ಕಾನ್‌ ಅನುಯಾಯಿಗಳಿಗೆ ಸಿಕ್ಕಿದ ವಿಗ್ರಹ ಕುರಿತು ನಾನಾ ವದಂತಿ

ಉಡುಪಿ: ಇಲ್ಲಿನ ಮಲ್ಪೆ ಕಡಲ ತೀರದಲ್ಲಿ ಭಾನುವಾರ ದೇವರ ವಿಗ್ರಹವೊಂದು ಸಮುದ್ರದಲ್ಲಿ ಸಿಕ್ಕಿ ಭಾರಿ ಕುತೂಹಲ ಕೆರಳಿಸಿದೆ. ಕೃಷ್ಣನೂರಿಗೆ ಸಾಕ್ಷಾತ್‌ ಕೃಷ್ಣನ ವಿಗ್ರಹವೇ ತೇಲಿ ಬಂದಿದೆ ಎಂದು ಭಾವಿಸಿ ಜನ ಸಂಭ್ರಮಿಸಿದ್ದಾರೆ. ಇದು ದೇವರ ಮಹಿಮೆ ಸಾವಿರಾರು ಜನ ವಿಗ್ರಹ ನೋಡಲು ಧಾವಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ.

ಮಲ್ಪೆಯಲ್ಲಿ ಪವಾಡ ಸಂಭವಿಸಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಭಾನುವಾರ ಉಡುಪಿ ಕೃಷ್ಣಮಠದಲ್ಲಿ ಇಸ್ಕಾನ್ ಸಂಸ್ಥೆಯ ಧಾರ್ಮಿಕ ಕಾರ್ಯಕ್ರಮ ಇತ್ತು. ಸಾವಿರಾರು ಜನ ಇಸ್ಕಾನ್ ಅನುಯಾಯಿಗಳು ಮಠಕ್ಕೆ ಬಂದವರು ಸಂಜೆ ಮಲ್ಪೆ ಸಮುದ್ರ ತೀರಕ್ಕೆ ತೆರಳಿದ್ದರು. ಈ ವೇಳೆ ಕಡಲ ದಡದಲ್ಲಿ ಸಿಕ್ಕ ವಿಗ್ರಹವೊಂದು ಎಲ್ಲರ ಗಮನ ಸೆಳೆದಿದೆ. ಅಲ್ಲಿ ಸೇರಿದ್ದ ಜನ ಆ ವಿಗ್ರಹವನ್ನು ಮೇಲಕ್ಕೆ ತೆಗೆದು ಸಂಭ್ರಮಿಸಿದ್ದಾರೆ.





















































 
 

ಉಡುಪಿಯ ಮೂಲ ಶ್ರೀಕೃಷ್ಣ ದೇವರ ವಿಗ್ರಹ ಕೂಡ ಕಡಲಲ್ಲೇ ಲಭ್ಯವಾದ ಕಾರಣ, ಇಸ್ಕಾನ್ ಭಕ್ತರು ಅದೇ ಪವಾಡ ಮತ್ತೊಮ್ಮೆ ಸಂಭವಿಸಿದೆ ಎಂದು ಭಾವಿಸಿದರು. ಅಲ್ಲಿ ಸೇರಿದ್ದ ಇಸ್ಕಾನ್ ಭಕ್ತರು ಆ ವಿಗ್ರಹವನ್ನು ಕೃಷ್ಣನೆಂದೇ ಭಾವಿಸಿ ಇಲ್ಲಿಂದ ಬೆಂಗಳೂರಿಗೆ ಕೊಂಡೊಯ್ದಿದ್ದಾರೆ.

ಆದರೆ ವಿಗ್ರಹ ಕೃಷ್ಣನದ್ದಲ್ಲ, ಕರಾವಳಿ ಭಾಗದ ದೇಗುಲಗಳ ಪ್ರವೇಶ ದ್ವಾರದ ಬಳಿ ಇರುವ ಜಯ-ವಿಜಯರ ವಿಗ್ರಹ ಎಂ ಬಲ್ಲವರು ಹೇಳುತ್ತಿದ್ದಾರೆ. ದ್ವಾರಪಾಲಕರಾಗಿ ದೇವಾಲಯದಲ್ಲಿ ಭಿನ್ನಗೊಂಡ (ಬಿರುಕಾದ) ವಿಗ್ರಹಗಳನ್ನು ಸಮುದ್ರ ಅಥವಾ ನದಿಗೆ ಬಿಡುವ ವಾಡಿಕೆ ಇದೆ. ಈ ರೀತಿ ಮುಳುಗಿಸಿ ಬಿಟ್ಟ ವಿಗ್ರಹ ದಡಕ್ಕೆ ಬಂದು ಬಿದ್ದಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹೊಸ ದೈವಸ್ಥಾನ, ದೇವಸ್ಥಾನಗಳ ಪುನರ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ಹಳೆಯ ಮೂರ್ತಿಗಳನ್ನು, ಕೆತ್ತನೆಗಳನ್ನು ಬದಲು ಮಾಡುತ್ತಾರೆ. ಧಾರ್ಮಿಕ ಆಚರಣೆಯ ಪ್ರಕಾರ ಅದನ್ನು ನದಿಗೆ ಅಥವಾ ಸಮುದ್ರಕ್ಕೆ ವಿಸರ್ಜನೆ ಮಾಡಲು ಸೂಚನೆ ಕೊಡಲಾಗುತ್ತದೆ. ಮಲ್ಪೆಯಲ್ಲಿ ಸಿಕ್ಕ ಮೂರ್ತಿ ಕೂಡ ಇಂಥದ್ದೇ ಆಗಿರಬಹುದು. ದೇವಸ್ಥಾನದ ದ್ವಾರಪಾಲಕರ ರೀತಿ ಈ ಮೂರ್ತಿ ಗೋಚರಿಸುತ್ತದೆ.

error: Content is protected !!
Scroll to Top