ಶ್ರೀ ಮಹಾಭಾರತ ಸರಣಿಯ 103 ನೇ ತಾಳಮದ್ದಳೆ

ಉಪ್ಪಿನಂಗಡಿ: ಶ್ರೀ ಕಾಳಿಕಾಂಬಾ ಯಕ್ಷ ಸೇವಾ ಟ್ರಸ್ಟ್ ಸ್ವರ್ಣ ಮಹೋತ್ಸವದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯ 103ನೇ ತಾಳಮದ್ದಳೆ ಕಲಿಕೀಚಕ ಎಂಬ ಪ್ರಸಂಗ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಭಾಗವತರಾಗಿ ಪದ್ಮನಾಭ ಕುಲಾಲ್, ಬಿ. ಸುರೇಶ ರಾವ್ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಚಂದ್ರಶೇಖರ ಆಚಾರ್ಯ ಪರಪ್ಪು ಭಾಗವಹಿಸಿದ್ದರು.

ವಿರಾಟನಾಗಿ ದಿವಾಕರ ಆಚಾರ್ಯ ಗೇರುಕಟ್ಟೆ, ಮಂತ್ರಿ ಮಾತಂಗ ಮತ್ತು ಭೀಮಸೇನನಾಗಿ ಶ್ರೀಧರ ಎಸ್ ಪಿ ಕೃಷ್ಣಾಪುರ, ರಥಕಾರನಾಗಿ ಸತೀಶ ಶಿರ್ಲಾಲು, ಕೀಚಕನಾಗಿ ಜಯರಾಮ ಗೌಡ ನಾಲ್ಗೊತ್ತು, ಶಂಖ ಮತ್ತು ಶ್ವೇತರಾಗಿ ಶ್ರುತಿ ವಿಸ್ಮಿತ್ ಮತ್ತು ಸತೀಶ ಶಿರ್ಲಾಲು ಭಾಗವಹಿಸಿದ್ದರು.





















































 
 

ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಈ ಪ್ರಸಂಗವನ್ನು ಶ್ರೀ ಕಾಳಿಕಾಂಬಾ ಯಕ್ಷ ಟ್ರಸ್ಟಿನ ಅಧ್ಯಕ್ಷ ದಿವಾಕರ ಆಚಾರ್ಯ ಅವರ ಸಂಯೋಜನೆಯಲ್ಲಿ ಪ್ರಥಮವಾಗಿ ತಾಳಮದ್ದಳೆ ರೂಪದಲ್ಲಿ ಪ್ರದರ್ಶಿಸಲಾಯಿತು.

error: Content is protected !!
Scroll to Top