ಪುತ್ತೂರು: ನಗರದ ಗ್ರಾಮಗಳಾದ ಬಲ್ನಾಡು, ಆರ್ಯಾಪು, ಇರ್ದೆ, ಬೆಟ್ಟಾಂಪಾಡಿ, ಕೆಮ್ಮಿಂಜೆ, ಪುತ್ತೂರು, ಕಸಬ, ಕೊಡಿಪ್ಪಾಡಿ ಗ್ರಾಮಗಳನ್ನು ಒಳಗೊಂಡ ಪುತ್ತೂರು ವಲಯದ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಪದಾಧಿಕಾರಿಗಳ ಆಯ್ಕೆ ಪುತ್ತೂರು ಗೌಡ ಸಮುದಾಯ ಭವನ ತೆಂಕಿಲದಲ್ಲಿ ನಡೆಯಿತು.
ಅಧ್ಯಕ್ಷರಾಗಿ ದಾಮೋದರ ಗೌಡ ಗೆಣಸಿನಕುಮೆರ್, ಪ್ರದಾನ ಕಾರ್ಯದರ್ಶಿಯಾಗಿ ಸತೀಶ್ ಗೌಡ ತೆಂಕಿಲ, ಕ್ರೀಡಾ ಕಾರ್ಯದರ್ಶಿಯಾಗಿ ಸುರೇಶ್ ಗೌಡ ಸರಳಿಕಾನ ಅವರನ್ನು ಆಯ್ಕೆ ಮಾಡಲಾಯಿತು.
ಪುತ್ತೂರು ವಲಯದ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಗೌರವ ಅಧ್ಯಕ್ಷರಾಗಿ ಧೀರಜ್ ಗೌಡ ಕೊಡಿಪ್ಪಾಡಿ, ಉಪಾಧ್ಯಕ್ಷರಾಗಿ ಸುಕೇಶ್ ಗೌಡ ಕೊಡಿಪ್ಪಾಡಿ, ಕೊಶಾಧಿಕಾರಿಯಾಗಿ ಕಿರಣ್ ಬೆದ್ರಾಳ, ಪ್ರಜ್ವಲ್ ಮರೀಲ್ ಸಂಘಟನಾ ಕಾರ್ಯದರ್ಶಿ ಸತೀಶ್ ಗೌಡ ಮರಿಕೆ, ಕಾರ್ಯದರ್ಶಿಯಾಗಿ ದಿನೇಶ್ ತೆಂಕಿಲ ಇವರುಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಪುತ್ತೂರು ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಕಾರ್ಯದರ್ಶಿ ಆನಂದ ಗೌಡ ತೆಂಕಿಲ, ನಿಯೋಜಿತ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ ಮೊದಲಾದವರು ಉಪಸ್ಥಿತರಿದ್ದರು.
























