ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ

ಪುತ್ತೂರು: ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ ಪುತ್ತೂರು ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯಿತು.

ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಪಥಸಂಚಲನ ಮಾಡಿ ಕ್ರೀಡಾ ಸಾಧನೆ ಮಾಡಿದ ವಿದ್ಯಾರ್ಥಿಗಳು ತಂದ ಕ್ರೀಡಾ ಜ್ಯೋತಿಯಿಂದ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಧ್ವಜಾರೋಹಣಗೈದು ಮಾತನಾಡಿದ ಶ್ರೀನಿವಾಸ ಗೌಡ (NCC ಆಫೀಸರ್ ನೇವಿ ವಿಂಗ್ ವಿಠಲ ಪಿಯು ಕಾಲೇಜು ವಿಟ್ಲ), ಕ್ರೀಡೆ ಮತ್ತು ಶಿಕ್ಷಣ ಎರಡು ಕೂಡ ಜೀವನಕ್ಕೆ ಅತ್ಯಗತ್ಯ. ಸಮಾಜದಲ್ಲಿ ಕೆಟ್ಟ ವಿಷಯಗಳತ್ತ ವಾಲದೆ ನಾವು ಪೋಷಕರಿಗೆ, ಶಿಕ್ಷಕರಿಗೆ ಹೆಸರು ತಂದು ಕೊಡುವ ಕೆಲಸ ಮಾಡಬೇಕು. ನೀವು ಮುಂದಿನ ಸಮಾಜದ ಉತ್ತಮ
ಶಕ್ತಿಗಳಾಗಿ ಎಂದು ಶುಭಹಾರೈಸಿದರು.





















































 
 

ಉದ್ಘಾಟನೆಯನ್ನು ಆಂಜನೇಯ ರೆಡ್ಡಿ (ಸಬ್ ಇನ್ಸ್ಪೆಕ್ಟರ್, ಟೌನ್ ಪೊಲೀಸ್ ಸ್ಟೇಷನ್ ಪುತ್ತೂರು) ಅವರು ಭಾರತೀಯ ಕ್ರೀಡಾ ಸಾಧಕರ ನಿದರ್ಶನಗಳನ್ನು ಹೇಳುತ್ತಾ, ಅವರಂತೆ ಸಾಧಕರಾಗಿ ಭಾರತ ದೇಶಕ್ಕೆ ಕೊಡುಗೆಯನ್ನು ನೀಡಿ. ಕಠಿಣ ಶ್ರಮ ಇದ್ದರೆ ಮಾತ್ರ ನಾವು ಜೀವನದಲ್ಲಿ ಸಾಧಕರಂತೆ ಹೆಸರು ಮಾಡಲು ಸಾಧ್ಯ. ಹಾಗಾಗಿ ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಜೊತೆ ಬದುಕನ್ನು ಕಟ್ಟಿ ಕೊಡುತ್ತದೆ ಎಂಬ ಕಿವಿಮಾತನ್ನಾಡಿ ಜೀವನದಲ್ಲಿ ಎಲ್ಲರ ಬದುಕು ಹಸನಾಗಲಿ ಎಂದು ಶುಭಹಾರೈಸಿದರು.

ಕ್ರೀಡಾ ನಾಯಕ ಧನುಷ್ ತೃತೀಯ ಬಿಸಿಎ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಸ್ವೀಕಾರ ನಡೆಸಿಕೊಟ್ಟರು.

ಮುಖ್ಯ ಅಥಿತಿ ಶಶಿಧರ್ ಕಿನ್ನಿಮಜಲು (ಅಧ್ಯಕ್ಷರು, ರೋಟರಿ ಈಸ್ಟ್ ಪುತ್ತೂರು) ಅವರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಅಕ್ಷಯ ಶಿಕ್ಷಣ
ಸಂಸ್ಥೆಯ ಪಾತ್ರ ಹಿರಿದಾಗಿದೆ. ಹಾಗಾಗಿ ನಿಮ್ಮ ಎಲ್ಲರ ಭವಿಷ್ಯವು ಉತ್ತಮವಾಗಿರುತ್ತದೆ ಎಂಬ ದೃಢ ನಂಬಿಕೆ ನನಗಿದೆ ಎಂದರು.

ಇನ್ನೊರ್ವ ಅತಿಥಿ ಸುಶಾಂತ್ ಕುಮಾರ್ (ಬ್ರಾಂಚ್ ಮ್ಯಾನೇಜರ್ ಭಾರತ್ ಬ್ಯಾಂಕ್ ಪುತ್ತೂರು) ಅವರು ವಿದ್ಯಾರ್ಥಿಗಳ ಬದುಕಿಗೆ ಕೆಲವೊಂದು ಮಾರ್ಗದರ್ಶನವನ್ನು ನೀಡಿದರು.

ಶ್ರೀಕಾಂತ್ ಪೂಜಾರಿ (ಬಿರವ ಯೂಥ್ ಅಂಬಾಸಿಡರ್, ಮಿನಿಸ್ಟ್ರಿ ಆಫ್ ಯೂತ್ ಅಫರೈಸ್ ಮತ್ತು ಸ್ಪೋರ್ಟ್ಸ್ ಗೋವರ್ಮೆಂಟ್ ಆಫ್ ಇಂಡಿಯಾ)
ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ವಹಿಸಿದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಯಂತ್ ನಡುಬೈಲು ಇವರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕನಸಿನ ಜೊತೆ ನನಸಾಗಿಸುವ ಮನಸು ಮುಖ್ಯ. ನಮ್ಮ ಸಂಸ್ಥೆಗಳ ವಿದ್ಯಾರ್ಥಿಗಳು ಕಡಿಮೆ ಅವಧಿಯಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಕಾಲೇಜಿಗೆ
ಹೆಮ್ಮೆ ತಂದಿರುತ್ತಾರೆ. ಹಾಗಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಕಠಿಣ ಪರಿಶ್ರಮ ಗೆಲುವಿನ ಮೂಲವೆಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್, ಅಕ್ಷಯ ಪದವಿ ಕಾಲೇಜಿನ ಪ್ರಾಂಶುಪಾಲ ಸಂಪತ್
ಕೆ. ಪಕ್ಕಳ, ಆಡಳಿತ ಅಧಿಕಾರಿ ಅರ್ಪಿತ್ ಟಿ. ಎ. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ, ದೈಹಿಕ ಶಿಕ್ಷಣ ಶಿಕ್ಷಕ ನವೀನ್,IQAC ನಿರ್ದೇಶಕಿ
ರಶ್ಮಿ ಉಪಸ್ಥಿತರಿದ್ದರು.

ನಿಶ್ಮಿತಾ ದ್ವಿತೀಯ ಬಿಸಿಎ, ದೇವಿಕಾ ದ್ವಿತೀಯ ಎಫ್.ಡಿ, ದೀಕ್ಷಾ ತೃತೀಯ ಐಡಿ ಅತಿಥಿಗಳ ಪರಿಚಯ ಮಾಡಿದರು, ಪ್ರಕೃತಿ ತೃತೀಯ ಎಫ್. ಡಿ. ಪ್ರಾರ್ಥನೆ ಹಾಡಿ, ಆಶಿಕಾ
ದ್ವಿತೀಯ ಬಿ. ಕಾಂ ಕ್ರೀಡಾ ಕಾರ್ಯದರ್ಶಿ ಸ್ವಾಗತಿಸಿ, ಕೆ ದೀಕ್ಷಾ ಪ್ರಥಮ ಬಿಸಿಎ ವಂದಿಸಿ, ಸುನೀಕ್ಷಾ ಪ್ರಥಮ ಬಿಸಿಎ ನಿರೂಪಿದರು.

ಆಕರ್ಷಕ ಪಥಸಂಚಲನ

ಅಕ್ಷಯ ಸಮೂಹ ಶಿಕ್ಷಣ ಸಮೂಹಸಂಸ್ಥೆಗಳಾದ ಅಕ್ಷಯ ಪದವಿ ಕಾಲೇಜು, ಅಕ್ಷಯ ಪದವಿ ಪೂರ್ವ ಕಾಲೇಜು ಹಾಗೂ ಅಕ್ಷಯ ಕೆರಿಯರ್ ಅಕಾಡೆಮಿಯಾ ವಿದ್ಯಾರ್ಥಿಗಳ
1೦ ತಂಡಗಳು ಪಥಸಂಚಲನದಲ್ಲಿ ಭಾಗವಹಿಸಿದವು.

error: Content is protected !!
Scroll to Top