ಬುರುಡೆ ಗ್ಯಾಂಗ್‌ ವಿರುದ್ಧವೇ ಚಿನ್ನಯ್ಯ ದೂರು

ತಿಮರೋಡಿ, ಮಟ್ಟಣ್ಣವರ್‌ನಿಂದ ಜೀವ ಬೆದರಿಕೆ ಇದೆ ಎಂದು ದೂರು

ಮಂಗಳೂರು: ಧರ್ಮಸ್ಥಳ ಷ್ಯಡ್ಯಂತ್ರ ಪ್ರಕರಣದ ಪ್ರಮುಖ ಬುರುಡೆ ಮ್ಯಾನ್ ಚಿನ್ನಯ್ಯ ಬುರುಡೆ ಗ್ಯಾಂಗ್‌ ವಿರುದ್ಧವೇ ತಿರುಗಿಬಿದ್ದಿದ್ದಾನೆ. 2 ದಿನಗಳ ಹಿಂದೆಯಷ್ಟೇ ಶಿವಮೊಗ್ಗದ ಕಾರಾಗೃಹದಿಂದ ಬಿಡುಗಡೆಯಾಗಿರುವ ಚಿನ್ನಯ್ಯ, ಜೀವ ರಕ್ಷಣೆ ಕೋರಿ ಬುರುಡೆ ಗ್ಯಾಂಗ್‌ ವಿರುದ್ಧ ದೂರು ನೀಡಿದ್ದಾನೆ.

ಬುರುಡೆ ಗ್ಯಾಂಗ್‌ನ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಜಯಂತ್ ಟಿ, ಯೂಟ್ಯೂಬರ್‌ ಸಮೀರ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.





















































 
 

ತನಗೆ ಹಾಗೂ ತನ್ನ ಪತ್ನಿಗೆ ಜೀವ ಬೆದರಿಕೆ ಹಾಕಬಹುದು, ನಮಗೆ ರಕ್ಷಣೆ ನೀಡಿ ಎಂದು ದೂರು ನೀಡಿದ್ದಾರೆ. ಬೆಳ್ತಂಗಡಿ ಪೊಲೀಸರು ದೂರು ಅರ್ಜಿಯನ್ನು ದಾಖಲಿಸಿಕೊಂಡಿದ್ದಾರೆ.

error: Content is protected !!
Scroll to Top