ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರಾ ಸಭೆ

ಉಪ್ಪಿನಂಗಡಿ: ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರೆ ಮತ್ತು ಜ. 31 ರಂದು ನಡೆಯುವ ದೊಂಪದ ಬಲಿ ನೇಮ ಬಗ್ಗೆ ಆಡಳಿತ ಸೇವಾ ಟ್ರಸ್ಟ್‌ನ ಸಭೆಯು ಟ್ರಸ್ಟ್ ಅಧ್ಯಕ್ಷ ಭಾಸ್ಕರ ಬಾರ್ಯ, ಪುತ್ತೂರು ಅಧ್ಯಕ್ಷತೆಯಲ್ಲಿ ಜರಗಿತು.

ಲೆಕ್ಕ ಪತ್ರ ಮಂಡನೆ, ಗತಸಭೆಯ ನಿರ್ಣಯಗಳ ಅನುಷ್ಠಾನ, ಫೆ. 6 ಮತ್ತು 7 ರಂದು ನಡೆಯಲಿರುವ ವಾರ್ಷಿಕ ಜಾತ್ರಾ ಉತ್ಸವ ಸಮಿತಿ ರಚನೆ ಬಗ್ಗೆ ಚರ್ಚೆ ನಡೆಸಲಾಯಿತು.

ಪವಿತ್ರಪಾಣಿ ಸೂರ್ಯನಾರಾಯಣ ಕುದ್ದಣ್ಣಾಯ, ಉಪಾಧ್ಯಕ್ಷ ನಾರಾಯಣಗೌಡ, ಪ್ರಧಾನ ಕಾರ್ಯದರ್ಶಿ ಪ್ರಶಾಂತ ಪೈ ಬಾರ್ಯ, ಖಜಾಂಜಿ ಶೇಷಪ್ಪ ಸಾಲಿಯಾನ್, ಅರ್ಚಕ ಗುರುಪ್ರಸಾದ್ ನೂರಿತ್ತಾಯ ಮತ್ತು ಇತರ ಟ್ರಸ್ಟಿಗಳು ಉಪಸ್ಥಿತರಿದ್ದರು.





















































 
 

ಟ್ರಸ್ಟಿ ಶಿವರಾಮ ನಾಯ್ಕ್ ಸ್ವಾಗತಿಸಿ, ಮನೋಹರ ಶೆಟ್ಟಿ ವಂದಿಸಿದರು.

error: Content is protected !!
Scroll to Top