ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ವಾರ್ಷಿಕ ಕ್ರೀಡಾಕೂಟ

ಪುತ್ತೂರು: ಇಲ್ಲಿನ ಕೃಷ್ಣನಗರದ ಅಲುಂಬುಡದಲ್ಲಿರುವ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ 2025ಗೆ 26ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ವಿಜೃಂಭಣೆಯಿಂದ ಜರುಗಿತು.

ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ನಾಯ್ತೊಟ್ಟು ಸುಂದರ ಗೌಡರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಮಾತನಾಡುತ್ತಾ ಅವರು ನಿರಂತರ ಸಾಧನೆ ನಿಮ್ಮನ್ನು ಅಂತಾರಾಷ್ಟ್ರೀಯ ಮಟ್ಟದ ತನಕ ಕೊಂಡೊಯ್ಯಬಲ್ಲದು ಮತ್ತು ಅದಕ್ಕೆ ಬೇಕಾದ ಸಂಪೂರ್ಣ ಬೆಂಬಲ ನೀಡುವ ಸಾಮರ್ಥ್ಯ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ಗಿದೆ ಎಂದರು. ಇದೇ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿದ್ದ ಆದರ್ಶ ಕೃಷಿಕ ಮತ್ತು ಸಮಾಜ ಸೇವಕ ರಾಮಣ್ಣ ಗೌಡ ಗುಂಡೋಲೆ ಮಾತನಾಡಿ ಸುಂದರ ಪರಿಸರದ ಶಾಲೆಯಲ್ಲಿ ನಿಮಗೆ ಭವ್ಯವಾದ ಕ್ರೀಡಾ ಭವಿಷ್ಯವಿದೆ ಎಂದರು.





















































 
 

ಸಭಾಧ್ಯಕ್ಷತೆ ವಹಿಸಿದ್ದ ಶಾಲಾಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡರು ಮಾತನಾಡಿ ಕ್ರೀಡೆ ಬರಿಯ ಆಟವಲ್ಲ, ಅದು ಜೀವನಕ್ಕೊಂದು ಪಾಠ ಎಂದರು.

ಕೋಡಿಂಬಾಡಿ ಕ್ಲಸ್ಟರ್ CRP ಶ್ರೀಮತಿ ದೇವ, ಪೋಷಕರ ಸಂಘದ ಅಧ್ಯಕ್ಷೆ ಶ್ರೀಮತಿ ಸೌಮ್ಯಾಶ್ರೀ ಹೆಗ್ಡೆ, ಉಪಾಧ್ಯಕ್ಷ ಉಮೇಶ್ ಮಳುವೇಲು, ನಿರ್ದೇಶಕರಾದ ಎ.ವಿ. ಗಂಗಾಧರ, ಸೀತಾರಾಮ ಕೇವಳ ಮತ್ತು ವಾಮನ್ ಎ. ವಿ., ಕ್ರೀಡಾಕೂಟದ ನಿರ್ದೇಶಕ ಮಾಧವ ಗೌಡ ಪೆರಿಯತ್ತೋಡಿ, ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ, ಪ್ರಾಂಶುಪಾಲ ಅಮರನಾಥ್ ಪಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರುಷಿ , ವಿಭಾ ಮತ್ತು ಚಾರ್ವಿ ಪ್ರಾರ್ಥಿಸಿದರು. ಶಾಖಾ ಸಂಚಾಲಕ ಎ.ವಿ. ನಾರಾಯಣ ಸ್ವಾಗತಿಸಿ ಶಿಕ್ಷಕಿ ಪ್ರಕ್ಷುತಾ ವಂದಿಸಿದರು. ಶಾಲಾ ನಾಯಕ ಅಧ್ವಿಕ್ ಬಂಜನ್ ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕಿ ಹಿತಾಶ್ರೀ ಕಾರ್ಯಕ್ರಮ ನಿರೂಪಿಸಿದರು. ಶಾಲಾ ನಾಯಕ ಕವನ್ ಕ್ರೀಡಾಜ್ಯೋತಿ ತಂದರು.

error: Content is protected !!
Scroll to Top