ಎಕ್ಸ್ ಖಾತೆಯಲ್ಲೂ ಪ್ರಧಾನಿ ಮೋದಿ ಅವರದ್ದೇ ದರ್ಬಾರ್

ನವದೆಹಲಿ: ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ‌ಹೋಗುತ್ತಿದೆ.

ಕಳೆದೊಂದು ‌ತಿಂಗಳ ಅಂಕಿ ಅಂಶಗಳ ಆಧಾರದಲ್ಲಿ ಹೇಳುವುದಾದರೆ, ಜಾಗತಿಕ ಮಟ್ಟದಲ್ಲೇ ಎಕ್ಸ್ ಖಾತೆಯಲ್ಲಿ ಅತೀ ಹೆಚ್ಚು ಲೈಕ್ಸ್ ಪಡೆದ ಹತ್ತು ಪೋಸ್ಟ್‌ಗಳ ಪೈಕಿ ಎಂಟು ಪೋಸ್ಟ್‌ಗಳು ಪ್ರಧಾನಿ ಮೋದಿ ಅವರದ್ದೇ ಆಗಿದೆ ಎನ್ನುವುದು ಗಮನಾರ್ಹ. ಇದು ಬೆಂಬಲಿಗರು, ಹಿಂಬಾಲಕರ ಜೊತೆಗೆ ಸಾರ್ವಜನಿಕರಿಗೆ ಪ್ರಧಾನಿ ಮೋದಿ ಬಗ್ಗೆ ಇರುವ ಆಸಕ್ತಿ ಮತ್ತು ಅವರ ಜನಪ್ರಿಯತೆಗೆ ಹಿಡಿದ ಕೈಗನ್ನಡಿಯಾಗಿದೆ ಎನ್ನಬಹುದು.

ಡಿ. 4ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ರಷ್ಯನ್ ಭಾಷೆಯ ‘ಭಗವದ್ಗೀತೆ’ ಪ್ರತಿಯನ್ನು ಉಡುಗೊರೆಯಾಗಿ ನೀಡಿದ ಚಿತ್ರವನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದರು. ಈ ಪೋಸ್ಟ್‌ಗೆ ಸುಮಾರು 2.31 ಲಕ್ಷ ಲೈಕ್‌ಗಳು ಲಭಿಸಿದ್ದು, 67 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಐದು ಸಾವಿರಕ್ಕೂ ಹೆಚ್ಚು ಕಮೆಂಟ್‌ಗಳು ಈ ಪೋಸ್ಟ್‌ನ ಸಂಚಲನಕ್ಕೆ ಸಾಕ್ಷಿಯಾಗಿವೆ.





















































 
 

ಕಳೆದ ಒಂದು ತಿಂಗಳಲ್ಲಿ ಪ್ರಧಾನಿಗಳ ಇತರ ಪೋಸ್ಟ್‌ಗಳೂ ಸಹ ಭಾರಿ ಪ್ರತಿಕ್ರಿಯೆ ಪಡೆದಿವೆ. ಅವುಗಳಲ್ಲಿ 19 ವರ್ಷದ ವೇದಮೂರ್ತಿ ದೇವವ್ರತ್ ಮಹೇಶ್ ರೇಖೆ ಅವರಿಗೆ ಸಂಬಂಧಿಸಿದ ಪೋಸ್ಟ್, ಅಯೋಧ್ಯೆಯ ರಾಮಜನ್ಮಭೂಮಿ ಮಂದಿರದ ಧರ್ಮ ಧ್ವಜಾರೋಹಣ ಉತ್ಸವದ ಕ್ಷಣಗಳು, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್ ಅವರ ವಿವಾಹಕ್ಕೆ ನೀಡಿದ ಶುಭಾಶಯ, ವಿಶ್ವಕಪ್ ಗೆದ್ದ ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡದ ಸಾಧನೆಯನ್ನು ಕೊಂಡಾಡಿದ ಪೋಸ್ಟ್‌ಗಳೂ ಸೇರಿವೆ.

error: Content is protected !!
Scroll to Top