ಈ ತಿಂಗಳಲ್ಲಿ ಜಮೆಯಾಗಲಿದೆ ಗೃಹಲಕ್ಷ್ಮಿಯ ಒಂದು ಕಂತು

ಮುಜುಗರದ ಬಳಿಕ ಒಂದು ಕಂತಿನ ಹಣ ಬಿಡುಗಡೆ ಮಾಡಿದ ಸರ್ಕಾರ

ಬೆಂಗಳೂರು: ಸರ್ಕಾರ ಗೃಹಲಕ್ಷ್ಮಿ ಸ್ಕೀಂನ ಒಂದು ಕಂತಿನ ಹಣ ಬಿಡುಗಡೆ ಮಾಡಿದೆ. ಹೀಗಾಗಿ ಗೃಹಲಕ್ಷ್ಮಿ ಹೊಸವರ್ಷಕ್ಕೂ ಮುನ್ನ ಬಹುತೇಕ ಈ ಮಾಸಾಂತ್ಯದಲ್ಲಿ ಗೃಹಲಕ್ಷ್ಮಿ ಒಂದು ಕಂತಿ ಹಣ ಖಾತೆಗೆ ಜಮೆಯಾಗಲಿದೆ.

ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಕೊಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೇಲೆ ಈಗ 2-3 ತಿಂಗಳಿಗೊಮ್ಮೆ ಮಾತ್ರ ಗೃಹಲಕ್ಷ್ಮಿ ದುಡ್ಡು ಆಕೌಂಟ್ ಹಾಕುತ್ತಿದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣವನ್ನು ಜಮೆ ಮಾಡದಿರುವ ವಿಚಾರ ಬಯಲಾದ ಬಳಿಕ ಸರ್ಕಾರ ಭಾರಿ ಮುಜುಗರ ಅನುಭವಿಸಿದೆ. ಸದನದಲ್ಲಿ ಈ ವಿಚಾರವಾಗಿ ನಡೆದ ಜಟಾಪಟಿಯ ಬಳಿಕ ಕೊನೆಗೂ ಸೆಪ್ಟೆಂಬರ್‌ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ.





















































 
 

ಡಿಸೆಂಬರ್‌ 16ರಂದೇ ಆರ್ಥಿಕ ಇಲಾಖೆಯಿಂದ ಸೆಪ್ಟೆಂಬರ್‌ ಕಂತಿನ ಹಣ ಬಿಡುಗಡೆ ಆಗಿದ್ದು, ಹೊಸ ವರ್ಷಕ್ಕೂ ಮುನ್ನವೇ ಗೃಹಲಕ್ಷ್ಮಿಯರ ಖಾತೆಗೆ ಹಣ ಜಮೆಯಾಗುವ ಸಾಧ್ಯತೆಯಿದೆ.

ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳ ಕಂತುಗಳು ಬಾಕಿಯಿದ್ದು, ಯಾವಾಗ ಬರುತ್ತದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಇನ್ನೊಂದು ವಾರದಲ್ಲಿ ಸೆಪ್ಟೆಂಬರ್ ಕಂತಿನ ಹಣ ಡಿಬಿಟಿ ಮೂಲಕ ಪ್ರತಿ ಮನೆ ಯಜಮಾನಿ ಖಾತೆಗೆ ಜಮೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

error: Content is protected !!
Scroll to Top