ಮಹೇಶ್‌ ಶೆಟ್ಟಿ ತಿಮರೋಡಿಗೆ ಮತ್ತೆ ಗಡಿಪಾರು ನೋಟಿಸ್‌

ಜಿಲ್ಲೆಯಿಂದ ಒಂದು ವರ್ಷ ಗಡಿಪಾರು ಮಾಡಿ ನೋಟಿಸ್‌ ಹೊರಡಿಸಿದ ಪುತ್ತೂರು ಸಹಾಯಕ ಆಯುಕ್ತೆ

ಧರ್ಮಸ್ಥಳ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಗಡಿಪಾರು ನೋಟಿಸ್​​ ಜಾರಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಮಹೇಶ್ ಶೆಟ್ಟಿ ಗಡಿಪಾರು ಮಾಡಲು ಆದೇಶ ನೀಡಲಾಗಿದೆ. ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಈ ಆದೇಶವನ್ನು ನೀಡಿದ್ದಾರೆ. ಮೊನ್ನೆಯಷ್ಟೇ ತಿಮರೋಡಿಗೆ ಗಡಿಪಾರು ನೋಟೀಸ್ ನೀಡಿದ್ದ ಸ್ಟೆಲ್ಲಾ ವರ್ಗೀಸ್ ಇದೀಗ ಮತ್ತೆ ಆದೇಶ ನೀಡಿದ್ದಾರೆ.

ಯಾಕೆ ಗಡಿಪಾರು ಮಾಡಬಾರದು ಅಂತ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ. ಡಿ.7ರಂದು ಸಹಾಯಕ ಆಯುಕ್ತರ ಗಡಿಪಾರು ನೋಟಿಸ್‌ಗೆ ಆಕ್ಷೇಪಣೆ ಸಲ್ಲಿಸಿದ್ದ ಮಹೇಶ್ ಶೆಟ್ಟಿ ತಿಮರೋಡಿ, ಇದೀಗ ಸಹಾಯಕ ಆಯುಕ್ತರು ಇದಕ್ಕೆ ಉತ್ತರ ಎಂಬಂತೆ ಮತ್ತೊಂದು ನೋಟಿಸ್​​​ ಜಾರಿ ಮಾಡಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಪುತ್ತೂರು ಸಹಾಯಕ ಆಯುಕ್ತರ ಎದುರು ವಕೀಲರ ಮೂಲಕ ಆಕ್ಷೇಪಣೆ ಸಲ್ಲಿಸಿದ್ದರು. ಈ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ವಕೀಲರು ಮತ್ತು ಆಯುಕ್ತರ ನಡುವೆ ವಾದ-ವಿವಾದ ನಡೆದು ಆಯುಕ್ತರು ತಿಮರೋಡಿ ವಿರುದ್ಧ ಮತ್ತೆ ಗಡೀಪಾರು ಆದೇಶ ನೀಡಿದ್ದಾರೆ.





















































 
 

ತಿಮರೋಡಿ ವಿರುದ್ಧದ ಈ ಹಿಂದಿನ ಕೇಸ್​​​ಗಳ ಜೊತೆಗೆ ಹಾಲಿ ಕೆಲ ಕೇಸು ಸೇರಿಸಿಕೊಂಡು ಗಡಿಪಾರು ಆದೇಶ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಡಿಸೆಂಬರ್‌ 18ರಿಂದ ತೊಡಗಿ 2026 ಡಿ.17ರವರೆಗೆ ಅಂದರೆ ಒಂದು ವರ್ಷಗಳ ಕಾಲ ಗಡಿಪಾರಿಗೆ ಆದೇಶ ನೀಡಲಾಗಿದೆ. ತಿಮರೋಡಿಯನ್ನು ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ಸರಹದ್ದಿಗೆ ಗಡಿಪಾರು ಮಾಡಲಾಗಿದೆ. ಈ ಹಿಂದೆ ತಿಮರೋಡಿ ಆಯುಕ್ತರ ಗಡಿಪಾರು ಆದೇಶವನ್ನು ಪ್ರಶ್ನಿಸಿ ಹಾಗೂ ಈ ಗಡೀಪಾರು ಆದೇಶವನ್ನು ರದ್ದು ಮಾಡವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಗಡಿಪಾರು ಆದೇಶ ರದ್ದು ಮಾಡಿ, ಸೆಕ್ಷನ್ ಸರಿಪಡಿಸಿ ಹೊಸ ಆದೇಶ ನೀಡುವಂತೆ ಪುತ್ತೂರು ಎಸಿಗೆ ಸೂಚನೆ ನೀಡಿದೆ. ಇದೀಗ ಅದರಂತೆ ಕೆಲ ಕಾನೂನಾತ್ಮಕ ಪ್ರಕ್ರಿಯೆ ಅಡಿಯಲ್ಲಿ ತಿಮರೋಡಿ ಗಡಿಪಾರು ಪ್ರಕ್ರಿಯೆ ಆರಂಭಿಸಿದ್ದೇವೆ ಎಂದು ಪುತ್ತೂರಿನ ಸಹಾಯಕ ಆಯುಕ್ತೆ ಹೇಳಿದ್ದಾರೆ.

error: Content is protected !!
Scroll to Top