ಬೆಳಗಾವಿ: ಕಳೆದ ಮೂರು ವರ್ಷಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಪಾಕ್ ಪರ ಘೋಷಣೆ ಕೂಡಿರುವ ಆರೋಪದಲ್ಲಿ 12 ಪ್ರಕರಣಗಳು ದಾಖಲಾಗಿವೆ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ವಿಧಾನ ಸಭಾ ಕಲಾಪದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 2023 ರಿಂದ 2025 ಅವಧಿಯಲ್ಲಿ 12 ಕೇಸ್ ಪಾಕಿಸ್ತಾನ ಜಿಂದಾಬಾದ್ ಕೂಗಿದ ಸಂಬಂಧ ಸ್ವಯಂ ಪ್ರೇರಿತ ದೂರು ಮತ್ತು ದೂರಿನ ಆಧಾರದಲ್ಲಿ ಕೇಸ್ ದಾಖಲು ಮಾಡಲಾಗಿದೆ. 12 ಕೇಸ್ ನಲ್ಲಿ 5 ಕೇಸ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. 2 ಕೇಸ್ ಬಿ ರಿಪೋರ್ಟ್ ವರದಿ ಸಲ್ಲಿಸಲಾಗಿದೆ. 3 ಕೇಸ್ ತನಿಖೆ ನಡೆಯುತ್ತಿದೆ. 1 ಕೇಸ್ ಸಿ ರಿಪೋರ್ಟ್ ಹಾಕಲಾಗಿದೆ. 1 ಕೇಸ್ FSL ನಿಂದ ವರದಿ ಬಾಕಿ ಬರಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು, ಎರಡೂವರೆ ವರ್ಷಗಳಲ್ಲಿ ಸ್ವಯಂ ಪ್ರೇರಿತವಾಗಿಯೂ ಪೊಲೀಸ್ ಇಲಾಖೆ ಕೇಸು ದಾಖಲು ಮಾಡಿದೆ. 2023ರಲ್ಲಿ 20,435 ಕೇಸ್, 2024 ರಲ್ಲಿ 19,152 ಮತ್ತು 2025 ರಲ್ಲಿ 21,712 ಕೇಸು ದಾಖಲು ಸ್ವಯಂ ಪ್ರೇರಿತವಾಗಿ ದಾಖಲು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
























