ಡಿ. 20 – ಜ. 4: ಜಿ.ಎಲ್. ಮಾಲ್ ಉತ್ಸವ, ಫುಡ್ ಫೆಸ್ಟಿವಲ್

ಪುತ್ತೂರು: ನಗರದ ಜಿ. ಎಲ್.‌ಮಾಲ್ ನಲ್ಲಿ ಚಳಿಗಾಲದ ವಿಶೇಷ ಎಂಬಂತೆ ಶಾಪಿಂಗ್ ಪ್ರೇಮಿಗಳಿಗೆ ಮತ್ತು ಆಹಾರ ಪ್ರಿಯರಿಗೆ ಡಿ. 20 ರಿಂದ ಜ. 4 ರ ವರೆಗೆ ‘ಜಿ. ಎಲ್. ಮಾಲ್’ ಉತ್ಸವ ಮತ್ತು ‘ಫುಡ್ ಫೆಸ್ಟಿವಲ್’ ಅನ್ನು ಆಯೋಜಿಸಲಾಗಿದೆ.

ಈ ಉತ್ಸವವು ಗ್ರಾಹಕರಿಗೆ ವಿಶೇಷ ರಿಯಾಯಿತಿಗಳು, ಮನರಂಜನೆ ಮತ್ತು ಅದೃಷ್ಟ ಪರೀಕ್ಷೆಗೂ ವೇದಿಕೆ ಕಲ್ಪಿಸಲಿದೆ.

ಈ ಸಂದರ್ಭದಲ್ಲಿ ಮಾಲ್‌ನಲ್ಲಿ ಶಾಪಿಂಗ್ ಮಾಡುವ ಗ್ರಾಹಕರಲ್ಲಿ ಅದೃಷ್ಟಶಾಲಿಗಳಿಗೆ ಲಕ್ಕಿ ಡ್ರಾ ಮೂಲಕ ಸ್ಮಾರ್ಟ್ ಫೋನ್ ಗೆಲ್ಲುವ ಅವಕಾಶವನ್ನು ಕಲ್ಪಿಸಲಾಗಿದೆ. ಮಾಲ್‌ನೊಳಗಿನ ಎಲ್ಲಾ ಅಂಗಡಿಗಳಲ್ಲೂ ದರ ಕಡಿತ, ಶಾಪಿಂಗ್ ಕೂಪನ್‌ಗಳು ಸಿಗಲಿವೆ. ಸೋಷಿಯಲ್ ಮೀಡಿಯಾದಲ್ಲಿ ಈ ಪ್ರಯುಕ್ತ ರೀಲ್ಸ್ ‌ಚಾಲೆಂಜ್ ಏರ್ಪಡಿಸಲಾಗಿದ್ದು, ಸೃಜನಶೀಲರಿಗೆ ಬಹುಮಾನವೂ ‌ಸಿಗಲಿದೆ. ವೀಕೆಂಡ್ ಧಮಾಕವಾಗಿ (ಡಿ. 21 ಮತ್ತು ಡಿ. 28) ಸಾಂಸ್ಕೃತಿಕ ಸಡಗರವೂ ನಡೆಯಲಿದೆ.





















































 
 

ರೋಟರಿ ಕ್ಲಬ್ ಯುವ ಸಹಯೋಗದಲ್ಲಿ ಡಿ. 28 ರಂದು ಬೆಳಗ್ಗೆ 10 ರಿಂದ ಬೃಹತ್ ಚಿತ್ರಕಲಾ ಸ್ಪರ್ಧೆ 7 ವಿಭಾಗಗಳಲ್ಲಿ ನಡೆಯಲಿದೆ. ಚಿತ್ರಕಲಾ ಸ್ಪರ್ಧೆ ಮತ್ತು ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸಲು ಬಯಸುವವರು ಹೆಚ್ಚಿನ ಮಾಹಿತಿ ಪಡೆಯಲು 7411962374 ಅಥವಾ 7411962375 ಸಂಖ್ಯೆಯನ್ನು ಸಂಪರ್ಕಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top