25ಕ್ಕೂ ಹೆಚ್ಚು ಕ್ರಿಮಿನಲ್‌ ಪ್ರಕರಣಗಳ ಕುಖ್ಯಾತ ಆರೋಪಿ ಬಂಧನ

ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪಾತಕಿ

ಮಂಗಳೂರು: ಹಲವು ಬಾರಿ ಜಾಮೀನು ರಹಿತ ವಾರಂಟ್‌ ಹೊರಡಿಸಿದ್ದರೂ ನ್ಯಾಯಾಲಯದ ವಿಚಾರಣೆಯಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳ ನಿವಾಸಿ ದಿವಂಗತ ಹಸನ್ ಮಹಮ್ಮದ್ ಎಂಬವರ ಪುತ್ರ ಅಬ್ದುಲ್ ರವೂಫ್ ಅಲಿಯಾಸ್ ಮೀಸೆ ರವೂಫ್ (48) ಆರೊಪಿ.

ಕಾಸರಗೋಡು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಸುಮಾರು 19 ಪ್ರಕರಣಗಳು, ಕಾವೂರು ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಮತ್ತು ಮಂಗಳೂರು ನಗರ ವ್ಯಾಪ್ತಿಯ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಐದು ಪ್ರಕರಣಗಳು ಸೇರಿದಂತೆ 25 ಕ್ರಿಮಿನಲ್ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.





















































 
 

ಅಬ್ದುಲ್ ರವೂಫ್ ಅಲಿಯಾಸ್ ಮೀಸೆ ರವೂಫ್ ಅಂತಾರಾಜ್ಯ ಕುಖ್ಯಾತ ಅಪರಾಧಿ ಮತ್ತು ಕೇರಳದ ಉಪ್ಪಳ ಪೈವಳಿಕೆ ನಿವಾಸಿ ಇಸುಬು ಜಿಯಾದ್ ಅಲಿಯಾಸ್ ಜಿಯಾ ಅವರ ನಿಕಟವರ್ತಿ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರಿನ ಪ್ರಕರಣಗಳಲ್ಲದೆ, ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಹಲವಾರು ಗಂಭೀರ ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ.

ನಿರ್ದಿಷ್ಟ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಿದ ಸಹಾಯಕ ಪೊಲೀಸ್ ಆಯುಕ್ತ (ಉತ್ತರ ಉಪವಿಭಾಗ) ಶ್ರೀಕಾಂತ್ ಕೆ ನೇತೃತ್ವದ ತಂಡ, ಎಎಸ್ಐ ಚಂದ್ರಶೇಖರ್ ಮತ್ತು ಸಿಬ್ಬಂದಿಗಳಾದ ಹೆಡ್‌ಕಾನ್‌ಸ್ಟೆಬಲ್ ರೇಜಿ ವಿ.ಎಂ, ದಾಮೋದರ ಕೆ ಮತ್ತು ಹಾಲೇಶ್ ನಾಯಕ್ ಡಿಸೆಂಬರ್ 16ರಂದು ಆರೋಪಿಯನ್ನು ಬಂಧಿಸಿದರು. ನಂತರ ಆತನನ್ನು ಹಾಜರುಪಡಿಸಿ ಮುಂದಿನ ಕಾನೂನು ಕ್ರಮಗಳಿಗಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು.

error: Content is protected !!
Scroll to Top